Home ಅಂತರಾಷ್ಟ್ರೀಯಎಂಎಸ್‌ಎಂಇ ಕ್ಷೇತ್ರಗಳಿಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ: ಬಿ.ಗೋಪಿನಾಥ್

ಎಂಎಸ್‌ಎಂಇ ಕ್ಷೇತ್ರಗಳಿಗೆ ಕೇಂದ್ರ ಸರ್ಕಾರದಿಂದ ಹೆಚ್ಚಿನ ಪ್ರೋತ್ಸಾಹ: ಬಿ.ಗೋಪಿನಾಥ್

by Editor

ಶಿವಮೊಗ್ಗ: ಕೇಂದ್ರ ಸರ್ಕಾರದ 2026ರ ಬಜೆಟ್‌ನಲ್ಲಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಉದ್ಯಮಗಳನ್ನು (ಎಂಎಸ್‌ಎಂಇ ) ಬೆಳವಣಿಗೆಗೆ ಪೂರಕವಾದ ನಿರ್ಧಾರ ತೆಗೆದುಕೊಂಡಿರುವುದು ಸ್ವಾಗತಾರ್ಹ ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ತಿಳಿಸಿದ್ದಾರೆ.

ಕೇಂದ್ರ ಸರ್ಕಾರದ ಬಜೆಟ್ ಮಂಡನೆ ಕುರಿತು ಪ್ರತಿಕ್ರಿಯಿಸಿ, ಪ್ರಮುಖ ಅಂಶಗಳನ್ನು ಬಜೆಟ್‌ನಲ್ಲಿ ಪರಿಗಣಿಸಲಾಗಿದೆ. ಇದರಿಂದ ದೇಶದ ವಾಣಿಜ್ಯ ಮತ್ತು ಕೈಗಾರಿಕಾ ಕ್ಷೇತ್ರಕ್ಕೆ ಹೆಚ್ಚಿನ ಅನುಕೂಲವಾಗಲಿದೆ. ಸಾರ್ವಜನಿಕ ಬಂಡವಾಳ ವೆಚ್ಚವನ್ನು 12.2 ಲಕ್ಷ ಕೋಟಿ ರೂ.ಗೆ ಹೆಚ್ಚಳ ಮಾಡಲಾಗಿದೆ ಎಂದಿದ್ದಾರೆ.

40,000 ಕೋಟಿ ರೂ. ವೆಚ್ಚದಲ್ಲಿ ಭಾರತ ಸೆಮಿಕಂಡಕ್ಟರ್ ಮಿಷನ್ 2.0 ಪ್ರಾರಂಭಿಸಲು ನಿರ್ಧಾರ ತೆಗೆದುಕೊಳ್ಳಲಾಗಿದೆ. ಭಾರತವನ್ನು ಜಾಗತಿಕ ಬಯೋಫಾರ್ಮಾ ಉತ್ಪಾದನಾ ಕೇಂದ್ರವಾಗಿ ಅಭಿವೃದ್ಧಿಪಡಿಸಲಾಗುತ್ತಿದೆ.

ಜವಳಿ, ಕೈಮಗ್ಗ ವಲಯಕ್ಕೆ ಪ್ರೋತ್ಸಾಹ, ಕೃಷಿ ಕಾಲೇಜು, ಆಸ್ಪತ್ರೆಗಳಿಗೆ ಹೆಚ್ಚಿನ ಅನುದಾನ, 3 ಹೊಸ ಆಯುರ್ವೇದ ಇನ್ಸ್ಟಿಟ್ಯೂಟ್, ವೆಟನರಿ ಕಾಲೇಜುಗಳ ಸ್ಥಾಪನೆ, ಅನಿಮೇಷನ್, ವಿಎಫ್‌ಎಕ್ಸ್ ವಲಯಕ್ಕೆ ಬೂಸ್ಟ್, ವಿಶ್ವದರ್ಜೆಯ ಟ್ರೆಕ್ಕಿಂಗ್‌ಗೆ ಭಾರತದಲ್ಲಿ ಅವಕಾಶ, 10 ವರ್ಷಗಳಿಗೆ ಹೊಸ ಖೇಲೋ ಇಂಡಿಯಾ ಮಿಷನ್, ಕ್ರೀಡಾವಲಯದ ಅಭಿವೃದ್ಧಿಗೆ ವಿಶೇಷ ಯೋಜನೆ ರೂಪಿಸುತ್ತಿರುವುದು ಒಳ್ಳೆಯ ಬೆಳವಣಿಗೆ.

ಕೌಶಲಾಭಿವೃದ್ಧಿಗೆ ಕೇಂದ್ರ ಒತ್ತು ನೀಡುತ್ತಿದೆ. 10 ವಿವಿಧ ರೀತಿಯ ಕೌಶಲಾಭಿವೃದ್ಧಿ ತರಬೇತಿ, ಎಲ್ಲಾ ವಲಯದವರಿಗಾಗಿ ತಂತ್ರಜ್ಞಾನ ಅಳವಡಿಕೆ, ಹೊಸ ತಂತ್ರಜ್ಞಾನಕ್ಕೆ ಎಲ್ಲಾ ರೀತಿಯ ಅವಕಾಶ, ಹೈ ಪವರ್ ಶಿಕ್ಷಣ, ಉದ್ಯೋಗ ಯೋಜನೆ, ಹೊಸ ಕೌಶಲಾಭಿವೃದ್ಧಿ ತರಬೇತಿ ಯೋಜನೆ, ಆರೋಗ್ಯ ವಲಯದಲ್ಲಿ ಕೌಶಲಾಭಿವೃದ್ಧಿ, 2, 3ನೇ ಹಂತದ ನಗರಗಳಿಗೆ ಹಲವು ಯೋಜನೆ, 5 ವರ್ಷಗಳಲ್ಲಿ 5 ಸಾವಿರ ಕೋಟಿ ಅನುದಾನ, 7 ಹೈ ಸ್ಪೀಡ್ ರೈಲು ಕಾರಿಡಾರ್‌ಗಳ ಘೋಷಣೆ, ಚೆನ್ನೈ- ಬೆಂಗಳೂರು ಹೈ ಸ್ಪೀಡ್ ರೈಲು ಕಾರಿಡಾರ್ ಘೋಷಿಸಿರುವುದು ಸ್ವಾಗತಾರ್ಹ.

ಕ್ಯಾನ್ಸರ್, ಮಧುಮೇಹ ಔಷಧಿಗಳು ಅಗ್ಗ, ದೇಶದಲ್ಲಿ ಕ್ಯಾನ್ಸರ್ ಮತ್ತು ಮಧುಮೇಹ ಔಷಧಿಗಳು ಅಗ್ಗ, ಖಾದಿ, ಗುಡಿ ಕೈಗಾರಿಕೆಗೆ ಒತ್ತು ನೀಡಲು ಯೋಜನೆ, ಖಾದಿಗೆ ಒತ್ತು ನೀಡಲು ಟೆಕ್ಸ್ಟೈಲ್ಸ್ ಪಾರ್ಕ್, 200 ಕೈಗಾರಿಕಾ ವಲಯಗಳ ಅಭಿವೃದ್ಧಿಗೆ ಒತ್ತು, ಮೂಲಸೌಕರ್ಯಕ್ಕೆ ವಿಶೇಷ ಯೋಜನೆ, ಟೆಕ್ಸ್ ಟೈಲ್ ವಲಯಕ್ಕೆ ಬೂಸ್ಟ್, ಕಂಟೇನರ್ ಉತ್ಪಾದನೆಗೆ 10 ಸಾವಿರ ಕೋಟಿ, ಮೆಗಾ ಟೆಕ್ಸ್ ಟೈಲ್ಸ್ ಪಾರ್ಕ್ ಘೋಷಣೆ ಮಾಡಿರುವುದು ಸ್ವಾಗತಾರ್ಹ.

ಆದಾಯ ತೆರಿಗೆಯಲ್ಲಿ ಹೊಸ ಕಾನೂನು ಪರಿಚಯ, ತೆರಿಗೆ ನಿಯಮಗಳ ಸರಳೀಕರಣ, ಟ್ಯಾಕ್ಸ್ ಕಟ್ಟಲು ಸಮಯಾವಕಾಶ, ಐಟಿಆರ್ ಫಾರ್ಮ್ ಗಳ ಸರಳೀಕರಣವನ್ನು ಘೋಷಣೆ, ಹೊಸ ಆದಾಯ ತೆರಿಗೆ ಕಾನೂನು ಏಪ್ರಿಲ್ 1, 2026ರಿಂದಲೇ ಜಾರಿಯಾಗುತ್ತಿರುವುದು ಹೆಚ್ಚಿನ ಅನುಕೂಲವಾಗಲಿದೆ ಎಂದು ಎಂದು ಜಿಲ್ಲಾ ವಾಣಿಜ್ಯ ಮತ್ತು ಕೈಗಾರಿಕಾ ಸಂಘದ ಅಧ್ಯಕ್ಷ ಬಿ.ಗೋಪಿನಾಥ್ ತಿಳಿಸಿದ್ದಾರೆ.

You may also like

Leave a Comment

ಸಮಾಜಸೇವಾ ಕಾರ್ಯಕರ್ತೆ ಕಲಾವಿದೆ ಕೆ.ಹೆಚ್.ಸುಮಿತ್ರ ಸುಮಗೆ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿಯ ಗರಿ ಸಾಧನೆಯ ಹೆಜ್ಜೆಗುರುತು.   Big News: ಹೊಸನಗರದಲ್ಲಿ ಅಕ್ರಮ ಭೂ ಮಂಜೂರಾತಿ: ತಹಶೀಲ್ದಾರ್-ಕ್ಲರ್ಕ್‍ಗಳೇ ನೇರ ಶಾಮೀಲು..!? ಕಾಸು ಕೊಟ್ಟರೆ ಯಾರಿಗೆ ಬೇಕಾದರೂ ಸರ್ಕಾರಿ ಜಾಗ ಬರೆದುಕೊಡುತ್ತಾರಂತೆ..!? ಕಂದಾಯ ಸಚಿವರೇ ಇತ್ತ ಗಮನಿಸಿ..!   ಡಿಚ್ಚಿ ಮುಬಾರಕ್ ಕಾಲಿಗೆ ಗುಂಡೇಟು: ಭದ್ರಾವತಿಯಲ್ಲಿ ಡಕಾಯಿತಿಗೆ ಯತ್ನಿಸಿದ್ದ ರೌಡಿಶೀಟರ್..!!   ಮಧ್ಯಮ ವರ್ಗ ಮತ್ತು ಸಣ್ಣ ಹೂಡಿಕೆದಾರರಿಗೆ ಬೆಳವಣಿಗೆಗೆ ಅವಕಾಶ: ನಿರ್ಮಲಾ ಸೀತಾರಾಮನ್   ರಕ್ಷಣಾ ಇಲಾಖೆಗೆ ಗಣನೀಯ ನಿಧಿ: ಕೇಂದ್ರ ಬಜೆಟ್‌ನಲ್ಲಿನಿರ್ಮಲಾ ಸೀತಾರಾಮನ್