Home Uncategorizedಆರ್ಥಿಕ ಶಿಸ್ತನ್ನು ಒಳಗೊಳ್ಳದ ನಿರಾಸೆ ಬಜೆಟ್ ಮಂಡನೆಯಾಗಿದೆ: ಡಾ. ಮಂಜುನಾಥ್ ಎಂಎಸ್.

ಆರ್ಥಿಕ ಶಿಸ್ತನ್ನು ಒಳಗೊಳ್ಳದ ನಿರಾಸೆ ಬಜೆಟ್ ಮಂಡನೆಯಾಗಿದೆ: ಡಾ. ಮಂಜುನಾಥ್ ಎಂಎಸ್.

by Editor

2026 -27 ನೇ ಸಾಲಿನ ಕೇಂದ್ರ ಮುಂಗಡ ಪತ್ರ ಒಟ್ಟು ವೆಚ್ಚದ ಪರಿಷೃತ ಅಂದಾಜು 49.6 ಲಕ್ಷ ಕೋಟಿ, 26-27ನೇ ಸಾಲಿನ ಸ್ವೀಕೃತಿಗಳು ಮತ್ತು ವೆಚ್ಚಗಳು 36.5 ಲಕ್ಷ ಕೋಟಿ ಮತ್ತು 53.5 ಲಕ್ಷ ಕೋಟಿ ಅಂದಾಜಿಸಲಾಗಿದೆ.

ದಾಖಲೆಯ 9ನೇ ಬಾರಿ ವಿತ್ತ ಸಚಿವೆ ನಿರ್ಮಲ ಸೀತಾರಾಮನ್ ಬಜೆಟ್ ಮಂಡಿಸಿದ್ದಾರೆ. 11 ಲಕ್ಷ ಕೋಟಿ ಬಂಡವಾಳ ವೆಚ್ಚ ಮಾಡಿದ್ದು, 28 ಲಕ್ಷ ಕೋಟಿ ಆದಾಯ ನಿರೀಕ್ಷೆ ಮಾಡಲಾಗಿದೆ.

ಜಿಎಸ್‌ಟಿ ಸರಣಿಕರಣ ಮಾಡಿದ್ದು, ವಿತ್ತೀಯ ಕೊರತೆ ಶೇ. 4.4 ಇಳಿಕೆ ಮಾಡಲಾಗಿದೆ. ಜನಸಾಮಾನ್ಯರ ಮೇಲೆ ತೆರಿಗೆ ಭಾರ ಇಲ್ಲದ, ಸಬ್ಕ ಸಾತ್- ಸಬ್ಕ ವಿಕಾಸ್, ವಿಕಾಸಿತ ಭಾರತ ಗುರಿಯನ್ನು ಇಟ್ಟುಕೊಳ್ಳಲಾಗಿದೆ. ಆದಾಯ ತೆರಿಗೆಯಲ್ಲಿ ಯಾವುದೇ ಬದಲಾವಣೆಗಳಿಲ್ಲ. ಇನ್ನು ಕರ್ನಾಟಕದ ಪಾಲಿಗೆ ಎರಡು ಹೈ ಸ್ಪೀಡ್ ರೈಲುಗಳಿಗೆ ಹಾಗೂ ಒಂದು ಟ್ರಕ್ಕಿಂಗ್ ಗೆ ಅವಕಾಶ ನೀಡಲಾಗಿದೆ. ಬಜೆಟ್ ಕೇವಲ ಘೋಷಣೆಗಳಿಗೆ ಮಾತ್ರ ಸೀಮಿತವಾಗಿದೆ.

ಕಳೆದ ಬಾರಿಯ ಮುಂಗಡ ಪತ್ರದಲ್ಲಿನ ಬಹಳಷ್ಟು ಘೋಷಣೆಗಳು ಈಡೇರದೆ ರಾಜ್ಯದ ನೀರಾವರಿ, ತೆರಿಗೆ ಪಾಲನ್ನು ಹಂಚದ ಕುರಿತು ದೂರುಗಳಿವೆ. ರಾಜ್ಯದ ಯೋಜನೆಗಳನ್ನು ವ್ಯತ್ಯಾಯಿಸಿರುವುದು, ಹೊಸ ವಿವಿ ಸ್ಥಾಪನೆ ಹೊರಡಿಸಿದ್ದು, ವಿವಿಯಲ್ಲಿನ ಮೂಲಭೂತ ಸಮಸ್ಯೆಗಳನ್ನು ಈವರೆಗೂ ಪರಿಗಣಿಸಿರುವುದಿಲ್ಲ.

ಕರ್ನಾಟಕ ರಾಜ್ಯಕ್ಕೆ  ಬಹಳ ನಿರಾಸೆಯ ಮುಂಗಡ ಪತ್ರವಾಗಿದೆ. ಬಡತನ, ನಿರುದ್ಯೋಗ, ಬೆಲೆ ಏರಿಕೆ ಬಗ್ಗೆ ನಿರ್ದಿಷ್ಟವಾದ ಕಾರ್ಯಕ್ರಮಗಳಿಲ್ಲ. ಮಹಿಳೆಯರಿಗೆ ಲಕಪತಿ ದೀದಿ ಯೋಜನೆ ಜಾರಿಗೆ ತರಲಾಗಿದೆ. ಬಂಡವಾಳದಾರರಿಗೆ, ಷೇರುಪೇಟೆ ಹೂಡಿಕೆದಾರರಿಗೆ ಬಹಳಷ್ಟು ನಿರಾಸೆ ಮೂಡಿಸಿದೆ. ಕಳೆದ ಬಾರಿಯ ಜಿಎಸ್‌ಟಿ ಹಂಚಿಕೆ ನಮ್ಮ ರಾಜ್ಯಕ್ಕೆ ಸಮರ್ಪಕವಾಗಿ ಹಂಚದೆ ಹಾಗೂ ಆರ್ಥಿಕ  ಅಸಮಾನತೆ ನಿವಾರಣೆಗೆ ಯಾವುದೇ ಕಾರ್ಯಕ್ರಮ ಘೋಷಿಸದೆ, ಜನಪರ ಕಾರ್ಯಗಳಿಗೆ ಪ್ರಾಮುಖ್ಯತೆ ಇಲ್ಲದೆ, ಬಡ ಹಾಗೂ ಮಧ್ಯಮ ವರ್ಗಕ್ಕೆ ಯಾವುದೇ ಅನುಕೂಲಕರವಾಗದ ಮುಂಗಡ ಪತ್ರವಾಗಿದೆ.

ಸಾಮಾನ್ಯ ಜನರ ಸಬಲೀಕರಣದ ಬಗ್ಗೆ ಚಕಾರವೆತ್ತದೆ, ಯಾವುದೇ ನಿರ್ದಿಷ್ಟ ಕಾರ್ಯಕ್ರಮಗಳಿಲ್ಲದ, ದೂರದೃಷ್ಟಿ ಇಲ್ಲದ, ಕರ್ನಾಟಕದ ಪಾಲಿಗೆ ಪರಿಣಾಮಕಾರಿ ಘೋಷಣೆಗಳಿಲ್ಲದ, ಆರ್ಥಿಕ ಶಿಸ್ತನ್ನು ಒಳಗೊಳ್ಳದ ನಿರಾಸೆ ಬಜೆಟ್ ಮಂಡನೆಯಾಗಿದೆ.

– ಡಾ. ಮಂಜುನಾಥ್ ಎಂಎಸ್. ನಿವೃತ್ತ ಅರ್ಥಶಾಸ್ತ್ರ ಪ್ರಾಧ್ಯಾಪಕರು ಹಾಗೂ ಆರ್ಥಿಕ ವಿಶ್ಲೇಷಕರು.

You may also like

Leave a Comment

ಸಮಾಜಸೇವಾ ಕಾರ್ಯಕರ್ತೆ ಕಲಾವಿದೆ ಕೆ.ಹೆಚ್.ಸುಮಿತ್ರ ಸುಮಗೆ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿಯ ಗರಿ ಸಾಧನೆಯ ಹೆಜ್ಜೆಗುರುತು.   Big News: ಹೊಸನಗರದಲ್ಲಿ ಅಕ್ರಮ ಭೂ ಮಂಜೂರಾತಿ: ತಹಶೀಲ್ದಾರ್-ಕ್ಲರ್ಕ್‍ಗಳೇ ನೇರ ಶಾಮೀಲು..!? ಕಾಸು ಕೊಟ್ಟರೆ ಯಾರಿಗೆ ಬೇಕಾದರೂ ಸರ್ಕಾರಿ ಜಾಗ ಬರೆದುಕೊಡುತ್ತಾರಂತೆ..!? ಕಂದಾಯ ಸಚಿವರೇ ಇತ್ತ ಗಮನಿಸಿ..!   ಡಿಚ್ಚಿ ಮುಬಾರಕ್ ಕಾಲಿಗೆ ಗುಂಡೇಟು: ಭದ್ರಾವತಿಯಲ್ಲಿ ಡಕಾಯಿತಿಗೆ ಯತ್ನಿಸಿದ್ದ ರೌಡಿಶೀಟರ್..!!   ಮಧ್ಯಮ ವರ್ಗ ಮತ್ತು ಸಣ್ಣ ಹೂಡಿಕೆದಾರರಿಗೆ ಬೆಳವಣಿಗೆಗೆ ಅವಕಾಶ: ನಿರ್ಮಲಾ ಸೀತಾರಾಮನ್   ರಕ್ಷಣಾ ಇಲಾಖೆಗೆ ಗಣನೀಯ ನಿಧಿ: ಕೇಂದ್ರ ಬಜೆಟ್‌ನಲ್ಲಿನಿರ್ಮಲಾ ಸೀತಾರಾಮನ್