Home ಕ್ರೀಡೆಸಮಾಜಸೇವಾ ಕಾರ್ಯಕರ್ತೆ ಕಲಾವಿದೆ ಕೆ.ಹೆಚ್.ಸುಮಿತ್ರ ಸುಮಗೆ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿಯ ಗರಿ ಸಾಧನೆಯ ಹೆಜ್ಜೆಗುರುತು.

ಸಮಾಜಸೇವಾ ಕಾರ್ಯಕರ್ತೆ ಕಲಾವಿದೆ ಕೆ.ಹೆಚ್.ಸುಮಿತ್ರ ಸುಮಗೆ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿಯ ಗರಿ ಸಾಧನೆಯ ಹೆಜ್ಜೆಗುರುತು.

Kitturu Rani chennamma Award to KH Sumitra suma

by Editor
          ಶಿವಮೊಗ್ಗ: ಕರ್ನಾಟಕ ಸರ್ಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಅಂಗವಾಗಿ ಕೊಡ ಮಾಡುವ ರಾಜ್ಯಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿಗೆ ಕಳದ 30 ವರ್ಷದಿಂದ ಏಲೆಮರೆಕಾಯಿಯಂತೆ ಸಮಾಜಸೇವೆ ಸಲ್ಲಿಸುತ್ತಿರುವ  ಸಮಾಜಸೇವಾ ಕಾರ್ಯಕರ್ತೆ ಜಾನಪದ ಕಲಾವಿದೆ ಕೆ.ಹೆಚ್.ಸುಮಿತ್ರ ಸುಮ ಭಾಜನವಾಗಿದ್ದಾರೆ. ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆ ಸಚಿವೆ ಲಕ್ಷ್ಮೀ ಅರ್.ಹೆಬ್ಬಾಳಕರ್ ರಾಜ್ಯಮಟ್ದದ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿ  ಪ್ರದಾನ ಮಾಡಿದರು.
       ಕೆ.ಹೆಚ್.ಸುಮಿತ್ರ ಸುಮ ಇವರು ಕಳೆದ 30 ವರ್ಷಗಳಿಂದ ಸಮಾಜಸೇವಾ ಕಾರ್ಯಕರ್ತೆಯಾಗಿ ಜಾನಪದ ಕಲಾವಿದೆಯಾಗಿ ಸಮಾಜಸೇವೆಯನ್ನು ಸಲ್ಲಿಸುತ್ತಿದ್ದಾರೆ. ನಿರಂತರವಾಗಿ ಮಹಿಳೆಯರ ಸರ್ವತೋಮುಖ ಅಭಿವೃದ್ಧಿಯಾಗಿ ಶ್ರಮಿಸುತ್ತಿದ್ದಾರೆ. ಭಾರತೀಯ ಜಾನಪದೀಯ ಗ್ರಾಮೀಣ ಕಲೆ, ಕ್ರೀಡೆ, ಯೋಗ, ಸಂಸ್ಕøತಿ, ಲಲಿತಕಲೆಗಳು, ಮಹಿಳಾ ಸಬಲೀಕರಣ, ಸಾಂಸ್ಕøತಿಕ ಕಾರ್ಯಕ್ರಮಗಳು, ಜಾನಪದ ಯುವಜನಮೇಳ, ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ, ವಿಶ್ವ ಯೋಗ ದಿನಾಚರಣೆ ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ಆಯೋಜನೆ ಮಾಡಿ ಅತ್ಯಂತ ಗುಣಮಟ್ಟದಿಂದ ನಡೆಸಿಕೊಟ್ಟ ಹೆಗ್ಗಳಿಕೆಗೆ ಭಾಜನರಾಗಿದ್ದಾರೆ. ಗ್ರಾಮೀಣ ಪ್ರದೇಶದ ಹಲವಾರು ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರುವಂತೆ ಮಾಡಿದ್ದಾರೆ.
     ಸುಮಾರು ಐದು ನೂರಕ್ಕೂ ಹೆಚ್ಚು ಸ್ವಸಹಾಯ ಸಂಘಗಳನ್ನು  ಗ್ರಾಮೀಣ ಪ್ರದೇಶದಲ್ಲಿ ರಚನೆ ಮಾಡಿ ಸುಮಾರು ಹತ್ತು ಸಾವಿರಕ್ಕೂ ಹೆಚ್ಚು ಮಹಿಳೆಯರು ಉಳಿತಾಯ ಮಾಡುವಂತೆ ಪ್ರೇರೆಪಣೆ ಮಾಡಿದ್ದಾರೆ. ರಾಷ್ಟ್ರೀಕೃತ ಬ್ಯಾಂಕ್ ಸಂಪರ್ಕ, ಕೇಂದ್ರ ಮತ್ತು ರಾಜ್ಯ ಸರ್ಕಾರದ ಹಲವು ಇಲಾಖೆಗಳಲ್ಲಿ ಸಿಗುವ ಸೌಲಭ್ಯಗಳ ಬಗ್ಗೆ ಸಂಪನ್ಮೂಲ ವ್ಯಕ್ತಿಯಾಗಿ ತರಬೇತಿ ನೀಡಿ ಮಾಹಿತಿ ಮಾರ್ಗದರ್ಶನ ಮಾಡಿದ್ದಾರೆ. ಕಡೂರಿನ ಪ್ರೇಮಜ್ಯೋತಿ ಮಹಿಳಾ ಮಂಡಳಿಗಳ ಒಕ್ಕೂಟದ ಮೂಲಕ ನಿರಂತರವಾಗಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಹಲವು ಗ್ರಾಮಗಳಲ್ಲಿ ಯಶಸ್ವಿಯಾಗಿ ಆಯೋಜನೆ ಮಾಡಿ ಮಹಿಳಾ ಸಾಧಕರನ್ನು ಗುರುತಿಸಿ ಸನ್ಮಾನಿಸಿದ್ದಾರೆ.
       ಚಿಕ್ಕಮಗಳೂರು ಜಿಲ್ಲೆ ಕಡೂರಿನ ಪ್ರೇಮಜ್ಯೋತಿ ಮಹಿಳಾ ಮಂಡಳಿಗಳ ಒಕ್ಕೂಟದ ಸಮಾಜಸೇವಾ ಕಾರ್ಯಕರ್ತೆಯಾಗಿ, ಶಿವಮೊಗ್ಗದ ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆಯ ಪತಂಜಲಿ ಕಡೂರು ಶಾಖೆಯ ಅಧ್ಯಕ್ಷೆಯಾಗಿ ಹಲವಾರು ವರ್ಷಗಳಿಂದ ನಿಸ್ವಾರ್ಥ ಸಮಾಜಸೇವೆಯನ್ನು ಸಲ್ಲಿಸುತ್ತಾ ಬಂದಿದ್ದಾರೆ. ಇವರು ಸಲ್ಲಿಸಿದ ಗಣನೀಯ ಸೇವೆಯನ್ನು ಗುರುತಿಸಿ ಜಿಲ್ಲಾ ಪಂಚಾಯತ್, ತಾಲ್ಲೂಕ್ ಪಂಚಾಯತ್, ಗ್ರಾಮ ಪಂಚಾಯತ್‍ಗಳಿಂದ ಸಹ್ಯಾದ್ರಿ ಮಲೆನಾಡು ಜಾನಪದ ಕಲಾ ಸೇವಾ ರತ್ನ ರಾಜ್ಯ ಪ್ರಶಸ್ತಿ, ವಿಶ್ವ ಕನ್ನಡ ಕಣ್ಮಣಿ ರಾಜ್ಯೋತ್ಸವ ರಾಜ್ಯ ಪ್ರಶಸ್ತಿ  ರಾಷ್ಟ್ರ ಕವಿ ಕುವೆಂಪು ಸದ್ಭಾವನಾ ರಾಜ್ಯ ಪ್ರಶಸ್ತಿ, ಕರ್ನಾಟಕ ಅರಣ್ಯ ಇಲಾಖೆಯ ಸಂಪನ್ಮೂಲ ವ್ಯಕ್ತಿಯಾಗಿ ಸೇವೆ ಸಲ್ಲಿಸಿ ಸಾಲುಮರದ ತಿಮ್ಮಕ್ಕ ಸದ್ಭಾವನಾ ರಾಜ್ಯ ಪ್ರಶಸ್ತಿ, ಪತಂಜಲಿ ಯೋಗ ಮತ್ತು ಪ್ರಕೃತಿ ಸಂಸ್ಥೆಯಿಂದ ರಾಜ್ಯಮಟ್ಟದ ಕನಕಶ್ರೀ ಚೇತನ ಪತಂಜಲಿ ರತ್ನ ರಾಜ್ಯ ಪ್ರಶಸ್ತಿ, ಸೇರಿದಂತೆ ಹತ್ತು ಹಲವು ಪ್ರಶಸ್ತಿಗಳು ಬಂದಿವೆ.
ರಾಜ್ಯಮಟ್ಟದ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿಗೆ ಭಾಜನರಾದ ಸಮಾಜಸೇವಾ ಕಾರ್ಯಕರ್ತೆ, ಜಾನಪದ ಕಲಾವಿದೆ. ಕೆ.ಹೆಚ್.ಸುಮಿತ್ರ ಸುಮ ರವರಿಗೆ ಕಡೂರು ಕ್ಷೇತ್ರ ಶಾಸಕ ಕೆ.ಎಸ್.ಆನಂದ್, ಕಡೂರು ಪುರಸಭೆ ಮಾಜಿ ಅಧ್ಯಕ್ಷ ಭಂಡಾರಿ ಶ್ರೀನಿವಾಸ್, ನಿವೃತ್ತ ಅಧಿಕಾರಿ ಜಿ.ರಾಜಣ್ಣ ಯರದಕೆರೆ, ಜೀವ ಮಾನ ಸಾಧನೆ ರಾಜ್ಯ ಪ್ರಶಸ್ತಿ ಪುರಸ್ಕøತ ಅಂತರರಾಷ್ಟ್ರೀಯ ಯೋಗಪಟು ಬೆಂಕಿ ಶೇಖರಪ್ಪ, ಸಂಘಟನಾ ಕಾರ್ಯದರ್ಶಿ ವೆಂಕಟೇಶ್, ರಾಜ್ಯ ಸಮಿತಿ ಸದಸ್ಯ ಕುಮಾರ ಸ್ವಾಮಿ, ಪ್ರಕಾಶಮೂರ್ತಿ, ಪತಂಜಲಿ ಗೌ:ಅಧ್ಯಕ್ಷ ಎಂ.ಈಶ್ವರಪ್ಪ ನವುಲೆ, ಗೌ:ಉಪಾಧ್ಯಕ್ಷ ಪಿ.ಬಾಲಪ್ಪ,ಅಧ್ಯಕ್ಷೆ ಎ.ಹೆಚ್.ಶ್ಯಾಮಲಾ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪರಿಸರ ಸಿ.ರಮೇಶ್, ನಿರ್ದೇಶಕ ಭವಾನಿಶಂಕರ್‍ರಾವ್, ಆಡಳಿತಾಧಿಕಾರಿ ಎಂ.ಪೂವಯ್ಯ ರಾಷ್ಟ್ರ ಮತ್ತು ರಾಜ್ಯ ಪ್ರಶಸ್ತಿ ಪುರಸ್ಕøತ ಯೋಗಾಚಾರ್ಯ ಪತಂಜಲಿ ಜೆ.ನಾಗರಾಜ್, ಸುದ್ದಿಸಾರ ದಿನಪತ್ರಿಕೆ ಬಳಗ ಶುಭ ಹಾರೈಸಿ ಅಭಿನಂದಿಸಿದ್ದಾರೆ.

You may also like

Leave a Comment

ಸಮಾಜಸೇವಾ ಕಾರ್ಯಕರ್ತೆ ಕಲಾವಿದೆ ಕೆ.ಹೆಚ್.ಸುಮಿತ್ರ ಸುಮಗೆ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿಯ ಗರಿ ಸಾಧನೆಯ ಹೆಜ್ಜೆಗುರುತು.   Big News: ಹೊಸನಗರದಲ್ಲಿ ಅಕ್ರಮ ಭೂ ಮಂಜೂರಾತಿ: ತಹಶೀಲ್ದಾರ್-ಕ್ಲರ್ಕ್‍ಗಳೇ ನೇರ ಶಾಮೀಲು..!? ಕಾಸು ಕೊಟ್ಟರೆ ಯಾರಿಗೆ ಬೇಕಾದರೂ ಸರ್ಕಾರಿ ಜಾಗ ಬರೆದುಕೊಡುತ್ತಾರಂತೆ..!? ಕಂದಾಯ ಸಚಿವರೇ ಇತ್ತ ಗಮನಿಸಿ..!   ಡಿಚ್ಚಿ ಮುಬಾರಕ್ ಕಾಲಿಗೆ ಗುಂಡೇಟು: ಭದ್ರಾವತಿಯಲ್ಲಿ ಡಕಾಯಿತಿಗೆ ಯತ್ನಿಸಿದ್ದ ರೌಡಿಶೀಟರ್..!!   ಮಧ್ಯಮ ವರ್ಗ ಮತ್ತು ಸಣ್ಣ ಹೂಡಿಕೆದಾರರಿಗೆ ಬೆಳವಣಿಗೆಗೆ ಅವಕಾಶ: ನಿರ್ಮಲಾ ಸೀತಾರಾಮನ್   ರಕ್ಷಣಾ ಇಲಾಖೆಗೆ ಗಣನೀಯ ನಿಧಿ: ಕೇಂದ್ರ ಬಜೆಟ್‌ನಲ್ಲಿನಿರ್ಮಲಾ ಸೀತಾರಾಮನ್