ಭದ್ರಾವತಿ: ನಮ್ಮ ದೇಶದ ಮೇಲೆ ನಿರಂತರವಾಗಿ ಆಕ್ರಮಣ ದಾಳಿ ನಡೆದರೂ ನಮ್ಮ ಮೂಲ ಸಂಸ್ಕ್ರತಿಗಳು ಇಂದಿಗೂ ನಾಶವಾಗದಿರುವುದಕ್ಕೆ ಮುಖ್ಯ ಕಾರಣ ಧರ್ಮ ಮೇಲಿರುವ ನಂಬಿಕೆ ಹಾಗು ಶ್ರಧ್ಧೆ ಬಹು ಕಾರಣ ಎಂದು ಖ್ಯಾತ ವಾಗ್ಮೀ ಚಕ್ರವರ್ತಿ ಸೂಲಿಬೆಲೆ ತಿಳಿಸಿದರು.
ಅವರು ನಗರದ ಉಂಬ್ಳೆಬೈಲು ರಸ್ತೆಯ ಬೊಮ್ಮನಕಟ್ಟೆ ವಿಐಎಸ್‍ಎಲ್ ಹೆಲಿಪ್ಯಾಡ್ ಬಳಿ ಹಮ್ಮಿಕೊಂಡಿದ್ದ ತರಳಬಾಳು ಹುಣ್ಣಿಮೆ ಮಹೋತ್ಸವದ ಕಾರ್ಯಕ್ರಮದಲ್ಲಿ ಸಮೂಹ ಮಾಧ್ಯಮ ಮತ್ತು ಸಮಾಜ ಎಂಬ ವಿಷಯದ ಉಪನ್ಯಾಸ ಕಾರ್ಯಕ್ರಮದಲ್ಲಿ ಆಗಮಿಸಿ ಮಾತನಾಡಿದರು.
ನಮ್ಮ, ಧರ್ಮದ ವಿಚಾರಗಳನ್ನುಒಬ್ಬರಿಂದ ಒಬ್ಬರಿಗೆ ತಿಳಿಸುವ ವಾಹಕವೆ ಮಾಧ್ಯಮ. ಆದರೆ ಮಾಧ್ಯಮ ಎಂದರೆ ಕೇವಲ ಟಿವಿ ಪೇಪರ್ ಗಳು ಮಾತ್ರವಲ್ಲ. ಇವರುಗಳು ಯಾವುದೆ ವಿಷಯಗಳಾಗಲಿ ಅದನ್ನು ಅರಿವ ಮಾಡಿಸುವ ಮೊದಲು ತಾವು ಅರಿತುಕೊಂಡಿದ್ದೇವಾ ಎಂದು ಅದರ ಸತ್ಯಾಸತ್ಯಗಳನ್ನು ಪ್ರಶ್ನಿಸಿಕೊಳ್ಳಬೇಕು. ಸಮಾಜದ ಕೆಟ್ಟ ಕೆಡುಕಿನ ವಿಚಾರಗಳ ಬಗ್ಗೆ ಮೊದಲಿಗೆ ನಾವು ಗಮನಹರಿಸುವ ನಾವು ಒಳ್ಳೆಯ ಸಂಗತಿಗಳ ಬಗ್ಗೆ ಅಷ್ಟಾಗಿ ಗಮನಹರಿಸುವುದಿಲ್ಲ ಎಂಬದನ್ನು ತಿಳಿಯಬೇಕು ಎಂದರು.
ಸಾಮಾಜಿಕ ಜಾಲ ತಾಣಗಳ ಪರಿಣಾಮ ಸಮಾಜದಲ್ಲಿ ಬಹಳವಾಗಿ ಆವರಿಸಿದೆ. ಹಿಂದೆ ಇವುಗಳ ಎಡ ಹಾಗು ಬಲ ಸಿದ್ದಾಂತದ ಹಿಡಿತದಲ್ಲಿ ಹೆಚ್ಚು ಪ್ರಚಾರ ಪ್ರಚಲಿತದಲ್ಲಿತ್ತು. ಯಾವುದೆ ಒಳಿತು ಕೆಡುಕಿನ ವಿಷಯಗಳ ಬಗ್ಗೆ ತಿಳಿಸುತ್ತಿತ್ತು. ಆದರೆ ಈಗ ಅವೆಲ್ಲವೂ ದೊಡ್ಡ ದೊಡ್ಡ ಕಂಪನಿಗಳ ಹಿಡಿತದಲ್ಲಿದೆ. ಅವರ ಸಿದ್ದಾಂತಕ್ಕೆ ಮಾರುಕಟ್ಟೆ ಆಧಾರದ ಮೇಲೆ ಸುದ್ದಿಯನ್ನು ಬಿತ್ತರಿಸುತ್ತಿದ್ದಾರೆ. ಇದರ ಜೊತೆಗೆ ಟಿವಿ ಮೊಬೈಲ್‍ಗಳ ವೀಕ್ಷಣೆಯ ಪರಿಣಾಮ ಎಲ್ಲರೂ ಅವುಗಳ ಮಾನಸಿಕ ಗುಲಾಮರನ್ನಾಗಿ ಮಾಢಿದೆ.
ಇದರ ಪರಿಣಾಮ ಅವರುಗಳು ಯಾವುದೆ ವಿಷಯಗಳ ಬಗ್ಗೆ ನರೇಟಿವ್ ಯುಧ್ಧವನ್ನು ಸದ್ದಿಲ್ಲದೆ ಮಾಡುತ್ತಾರೆ. ಇದರ ಪರಿಣಾಮಗಳ ಬಗ್ಗೆ ಎಂದೂ ಚಿಂತಿಸುವುದಿಲ್ಲ. ಇದಕ್ಕೆ ಜ್ವಲಮತ ಸಾಕ್ಷಿಯಾಗ ದೇಶದ ಪ್ರಸಿದ್ದ ಪುಣ್ಯ ಕ್ಷೇತ್ರ ಹಾಗು ದೇವಾಲಯ ಮತ್ತು ಅದರ ನಿವರ್ಹಣೆದಾರರ ಮೇಲೆ ವ್ಯವಸ್ಥಿತಿ ಅಪಪ್ರಚಾರವನ್ನು ಮಾಡಿ ಧಾರ್ಮಿಕ ಕ್ಷೇತ್ರದಲ್ಲಿ ಅಪನಂಬಿಕೆ ಬರುವಂತೆ ಮಾಡಿತು ಎಂದು ಶ್ರೀಕ್ಷೇತ್ರ ಧರ್ಮಸ್ಥಳದ ಹೆಸರು ಹೇಳದೆ ಅದರ ಹಿನ್ನಲೆಯ ಬಗ್ಗೆ ವಿವರಣೆ ನೀಡಿದರು. ಇದರ ಅನುಭವದ ಆಧಾರದ ಮೇಲೆ ಮಾಧ್ಯಮಳು ಬಹಳಸೂಕ್ಷ್ಮವಾಗಿ ದಾರಿ ತಪ್ಪಿಸುತ್ತವೆ. ಹಾಗಾಗಿ ನಾವೆಲ್ಲರೂ ಇದನ್ನು ಒಟ್ಟಾಗಿ ಎದುರಿಸಬೇಕು. ಅದಕ್ಕಾಗಿ ಮೊದಲು ಬೌಧ್ಧಿಕವಾಗಿ ತಿಳುವಳಿಕೆಯನ್ನು ಹೊಂದುವ ಮೂಲಕ ಬುಧ್ಧಿವಂತರಾಗಬೇಕು. ಆಗ ಇವುಗಳ ಸತ್ಯಾಸತ್ಯತೆಯ ಬಗ್ಗೆ ಸರಿಯಾದ ಸ್ಪಷ್ಟನೆ ದೊರೆಯುತ್ತದೆ ಎಂದರು.
ನೇಪಾಳ, ವೆಜುನಿಲಾಗಳಲ್ಲಿ ಯುವ ಜನಾಂಗದವರನ್ನು ಸುಳ್ಳು ಸುದ್ದಿಯನ್ನು ಹಬ್ಬಿಸುವ ಮೂಲಕ ವ್ಯವಸ್ಥಿತಿವಾಗಿ ದಂಗೆ ಆಗುವಂತೆ ಮಾಡಿ ಕಾನೂನು ಸುವ್ಯವಸ್ಥೆಯನ್ನು ಹದಗೆಡಿಸಿದರು. ಇಂತಹ ಸಂಗತಿಗಳ ಬಗ್ಗೆ ಎಚ್ಚರದಿಂದ ಇರಬೇಕು. ಒಂದು ವೇಳೆ ಮೈ, ಮರೆತರೆ ಇಂತಹ ಘಟನೆಗಳು ನಮ್ಮಲ್ಲಿ ನಡೆಯಲು ನಾವೆ ಕಾರಣರಾಗುತ್ತೇವೆ ಎಂದು ಎಚ್ಚರಿಸಿದರು.
ಎಂಎಲ್‍ಸಿ ಎಸ್.ಎಲ್.ಭೋಜೇಗೌಡ ಮಾತನಾಡಿ ಇಂದು ಸಮಾಜದಲ್ಲಿ ಮಾನವೀಯ ಮೌಲ್ಯಗಳನ್ನು ಕಳೆದುಕೊಂಡಿದ್ದೇವೆ. ಪರಸ್ಪರಲ್ಲಿ ದ್ವೇಷ ಅಸೂಯೆಗಳ ಭಾವನೆಯಿಂದ ಜೀವಿಸುತ್ತಿದ್ದೇವೆ. ಇಂತಹ ಸಂಧರ್ಭದಲ್ಲಿ ಶ್ರೀ ಮಠವುಪರಸ್ಪರರಲ್ಲಿ ಬೆಸುಗೆ ಹಾಕುವ ಕೆಲಸವನ್ನು ಮಾಡುತ್ತಿದೆ ಎಂದರು.
ಶ್ರೀ ಮಠವು ಸಮಾಜದ ಬಡವರು ಮಧ್ಯಮವರ್ಗದವರ ಮಕ್ಕಳಿಗೆ ವಿಧ್ಯಾಭ್ಯಾಸ ದೊರೆಯಬೇಕು ಎಂದು ನೂರಾರು ಶಾಲಾ ಕಾಲೇಜುಗಳನ್ನು ನಡೆಸುತ್ತಿದೆ. ಆದರೆ ವೈಧ್ಯಕೀಯ ಇಂಜೀನೀಯರಿಂಗ್ ನಂತಹ ದೊಡ್ಡ ದೊಡ್ಡ ವಿಧ್ಯಾ ಸಂಸ್ಥೆಗಳನ್ನು ಪ್ರಾರಂಭ ಮಾಡಿ ಹಣ ಮಾಡುವ ಉದ್ದೇಶವನ್ನು ಹೊಂದದಿರುವುದು ಶ್ರೀಗಳವರ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದೆ. ಆ ಮೂಲಕ ಶೈಕ್ಷಣಿಕ ಕ್ರಾಂತಿ ಮಾಡಿದೆ. ಗುಣಮಟ್ಟದ ಶಿಕ್ಷಣ ನೀಡಿ ಬಲಿಷ್ಟ ಸಮಾಜವನ್ನು ನಿರ್ಮಾಣ ಮಾಡುವ ಮಹತ್ತರವಾದ ಕಾರ್ಯವನ್ನು ಮಾಡುತ್ತಿದೆ ಎಂದರು.
“ಎಲ್ಲದಕ್ಕಿಂತ ಬಹು ಮುಖ್ಯವಾಗಿ ಸಮಾಜದಲ್ಲಿ ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಸಮಸ್ಯೆಗಳಾದ ಕುಟುಂಬದಲ್ಲಿ ಆಸ್ತಿ ಹಂಚಿಕೆ ಹಾಗು ಹೆಣ್ಣು ಮಕ್ಕಳಿಗೂ ಸಹ ತಂದೆ ಆಸ್ತಿಯಲ್ಲಿ ಪಾಲು ಕೊಡಬೇಕು ಎಂಬ ಸರ್ಕಾರದ ಕಾನೂನಿನ ಕಾರಣ ಬಹಳಷ್ಟು ಕುಟುಂಬಗಳಲ್ಲಿ ಕೇಸು ಹಾಕುವ ಮೂಲಕ ಕುಟಂಬ ಛಿದ್ರವಾಗುತ್ತಿದೆ. ಅಣ್ಣ ತಮ್ಮಂದಿರ ನಡುವೆ ಕಲಹ ಉಂಟಾಗಿ ಪರಸ್ಪರ ಸೌಹಾರ್ಧ ಸಂಭಂಧಗಳು ದೂರ ಆಗುತ್ತಿದೆ. ಇದರ ಬಗ್ಗೆ ಸ್ವಾಮಿಗಳವರು ತಮ್ಮ ಸದ್ದರ್ಮ ನ್ಯಾಯ ಪೀಠದವತಿಯಿಂದ ಸೂಕ್ತ ನ್ಯಾಯ ನೀಡುವ ಮೂಲಕ ಕುಟುಂಬದ ಒಡಕ್ಕನ್ನು ಮುಚ್ಚಿ ಬೆಸುಗೆ ಹಾಕಿ ಆಮೂಲಕ ಸೌಹಾರ್ಧ ವಾತಾವರಣವನ್ನು ಉಂಟು ಮಾಡುವ ಕಾರ್ಯವನ್ನು ಮಾಡುತ್ತಿದ್ದಾರೆ. ಸರ್ಕಾರ ಆಸ್ತಿ ಹಂಚಿಕೆಯಲ್ಲಿ ಕಾನೂನು ಮಾಡಿರಬಹುದು ಆದರೆ ಕುಟುಂಬದ ನೈತಿಕ ಮಾರ್ಗದ ಬಗ್ಗೆ ಯೋಚನೆ ಮಾಡಬೇಕಿದೆ. ತವರಿನ ಹಾಗು ಸಹೋದರರ ಸಂಭಂಧವನ್ನು ಯಾರು ಯಾವುದೆ ಕಾರಣಕ್ಖೂ ಕಳೆದುಕೊಳ್ಳಬಾರದು ಎಂಬ ಆಶಯವನ್ನು ಹೊಂದಿರುವ ಘಟನೆಯನ್ನು ಉದಾಹರಣೆಯಾಗಿ ನೀಡಿದರು.”
ಮಾಜಿ ಕಾನೂನು ಸಚಿವ ಮಾಧುಸ್ವಾಮಿ ಮಾತನಾಡಿ ಇಂದು ಸಮಾಜ ನಂಬಿಕೆ ಮೇಲೆ ನಿಂತಿದೆ. ನಂಬಿಕೆ ಎನ್ನುವುದು ಶ್ರೇಷ್ಠ ವಸ್ತು. ಹೇಳುವುದು, ನೋಡುವುದು, ಬರೆಯವುದೆಲ್ಲ ಸತ್ಯವಲ್ಲ, ನಾನು ಮತ್ತು ನಮ್ಮಲ್ಲಿರುವ ಅಹಂ ಎಂಬ ಅಂಶ ಹೋಗಬೇಕು. ಯಾವುದೆ ವಿಚಾರ ಇರಲಿ ಅದರ ಹಿನ್ನಲೆ ಸತ್ಯಾ ಸತ್ಯತೆಯನ್ನು ಸ್ಪಷ್ಟಮಾಡಿಕೊಳ್ಳಬೇಕು. ಯಾವ ವಿಚಾರವನ್ನು ಸರಿಯಾಗಿ ಪರಾಮರ್ಶಿಸದೆ ನಂಬಬೇಡಿ. ಪ್ರಶ್ನೆ ಮಾಡುವ ಧೈರ್ಯವನ್ನು ಬೆಳೆಸಿಕೊಳ್ಳಿ ಆಗ ಜೀವನದಲ್ಲಿ ಸಮಾಜದಲ್ಲಿ ಯಾವುದೆ ರೀತಿಯ ಗೊಂದಲ ಇರುವುದಿಲ್ಲ ಎಂದರು.
ಮಾಧ್ಯಮದವರು ಮೊದಲು ಸತ್ಯವಂತರಾಗಿ ಸಮಾಜಕ್ಕೆ ಉತ್ತಮ ಸಂದೇಶವನ್ನು ನೀಡಬೇಕು. ಆದರೆ ಇತ್ತಿಚಿನ ದಿನಗಳಲ್ಲಿ ಯಾವ ಕಾರಣ ಯಾವ ಹಿನ್ನಲೆಯಲ್ಲಿ ಧನಾತ್ಮಕವಾದ ಸುದ್ದಿಗಳನ್ನು ಋಣಾತ್ಮಕವಾಗಿ ಮಾಡುತ್ತಿದ್ದಾರೆ ಎಂಬುದು ಗೋತ್ತಾಗುತ್ತಿಲ್ಲ. ಸುಳ್ಳು ಸುದ್ದಿಗಳನ್ನು ವಿಜೃಂಭಿಸಿ ಅವುಗಳೆ ಸತ್ಯ ಎಂದು ಹೇಳಲಾಗುತ್ತಿದೆ. ಅವುಗಳಿಗೆ ಯಾವುದೆ ರೀತಿಯ ಗುಣಮಟ್ಟ ಬೇಕಿಲ್ಲ. ಬ್ರಾಂಡೆಡ್ ಸರಕಿನ ಬಗ್ಗೆ ಇರುವ ಮೋಹ ಸರಿಕಿನ ಗುಣಮಟ್ಟದ ಬಗ್ಗೆ ಆದ್ಯತೆ ನೀಡುತ್ತಿಲ್ಲ. ಬ್ರಾಂಡ್ ಶ್ರೇಷ್ಟವಲ್ಲ. ಸರಕು ಶ್ರೇಷ್ಟ ಎಂಬುದನ್ನು ಎಲ್ಲರೂ ಅರಿತುಕೊಳ್ಳಬೇಕಿದೆ ಎಂದರು
ಮಾಧ್ಯಮಗಳು ವಿಚಾರಗಳ ಬರೆಯುವದಕ್ಕೆ ಮೊದಲು ಹಾಗು ಅದನ್ನು ನಂಬಿಸುವುದಕ್ಕೆ ಮೊದಲು ಇದರಿಂದ ಯಾರಿಗಾದರೂ ಒಳ್ಳೆಯದಾಗುತ್ತದೆಯಾ ಎಂಬ ಬಗ್ಗೆ ಅತ್ಮಸಾಕ್ಷಿಗೆ ಕೇಳಿಕೊಳ್ಳಿ. ಇಲ್ಲದಿದ್ದರೆ ಯಾಕೆ ಸುದ್ದಿಯನ್ನು ವಿನಾಕಾರಣ ವೈಭವೀಕರಿಸಿ ಏನು ಸಾಧಿಸುತ್ತಿರಾ. ಧರ್ಮ ಮತ್ತು ಬದುಕು ಎಲ್ಲರನ್ನೂ ಎಲ್ಲವನ್ನೂ ಒಟ್ಟಿಗೆ ಕೊಂಡೋಯ್ಯುವುದಾಗಿದೆ ಅಂತಹ ಪರಿಸ್ಥಿತಿಯನ್ನು ಎಲ್ಲರೂ ಸೇರಿ ನಿರ್ಮಾಣ ಮಾಡಬೇಕಿದೆ ಎಂದು ಮನವಿ ಮಾಡಿದರು.
ತಮ್ಮ ರಾಜಕೀಯ ಜೀವನದ ಅನುಭವವನ್ನು ತಿಳಿಸುತ್ತಾ ತಾವು ಕೆಎಂಎಫ್ ಅಧ್ಯಕ್ಷರಾಗಿರುವ ಸಂಧಂರ್ಭದಲ್ಲಿ ಹಳ್ಳಿ ಹೈನುಗಾರರಗೆ ಅನುಕೂಲ ಮಾಡಿಕೊಬೇಕು ಎಂಬ ಉದ್ದೇಶದಿಂದ ಹಾಲಿನ ದರವನ್ನು ಜಾಸ್ತಿ ಮಾಡಿದೆ. ಮಾರನೆ ದಿನ ಕನ್ನಡ ಪ್ರಭ ಪತ್ರಿಕೆಯಲ್ಲಿ ಕೆಎಂಎಫ್ ನಲ್ಲೋಬ್ಬ ಕಂಸ ಕುಳಿತಿದ್ದಾನೆ ಎಂದು ಮುಖ್ಯ ಬರಹದಲ್ಲಿ ಪ್ರಕಟಿಸಿದರು. ಆಗ ರಾಮಕೃಷ್ಣಹೆಗಡೆಯವರು ರಾಜ್ಯದಲ್ಲಿ ಸಿಎಂ ಆಗಿದ್ದರು. ಅವರು ನನ್ನನ್ನು ಕರೆದು ಖಾದ್ರಿ ಶಾಮಣ್ಣ ಈ ರೀತಿ ಬರೆದಿದ್ದಾರೆ ಎಂದು ಹೇಳಿ ಇದರ ಬಗ್ಗೆ ಸ್ಪಷ್ಟನೆ ನೀಡಿ ಎಂದದರು.ಆಗ ಖಾದ್ರಿ ಶಾಮಣ್ಣ ರವರನ್ನು ಭೇಟಿ ಮಾಡಿ ಈ ರೀತಿ ಯಾಕೆ ಬರೆದಿದ್ದಿರಾ ಎಂದು ಪ್ರಶ್ನೆಮಾಡಿದಾಗ ಅವರು ಜನರಿಗೆ ಹೊರೆ ಆಗುತ್ತದೆ ಎಂದು ಬರೆದೆ ಎಂದಾಗ ಹಳ್ಳಿ ಹೈನುಗಾರರಿಗೆ ರೊಟ್ಟಿ ದೊರೆಯಲಿ ಎಂಬ ಕಾರಣಕ್ಕೆ ಬರೆದಿದ್ದೇನೆ ಎಂದು ಸ್ಪಷ್ಟನೆ ನೀಡಿದಾಗ, ಅವರು ತಾವು ಸುದ್ದಿಯನ್ನು ಪ್ರಕಟಿಸುವ ಭರದಲ್ಲಿ ಅದರ ಹಿನ್ನೆಲೆ ಹಾಗು ಸತ್ಯಸತ್ಯತೆಯನ್ನು ಪರಿಶೀಲಿಸುವ ಗೋಜಿಗೆ ಹೋಗಲಿಲ್ಲ ಎಂದು ಹೇಳಿ ತಮ್ಮ ಪ್ರಮಾದವನ್ನು ಒಪ್ಪಿಕೊಂಡರು. ಹಾಗೆ ಇಂದಿನ ಮಾಧ್ಯಮದವರು ಸಹ ಯಾವುದೆ ಸುದ್ದಿಯನ್ನು ಪ್ರಕಟಿಸುವ ಭರದಲ್ಲಿ ತಮ್ಮಲ್ಲಿ ಮೊದಲು ಪ್ರಕಟವಾಗ ಬೇಕು ಎಂಬ ಪ್ಯಪೋಟಿಯಲ್ಲಿ ಸುದ್ದಿಯ ಸಾಚಾತನವನ್ನು ಪರಿಶೀಲಿಸಿ ಪ್ರಕಟಿಸಿ ಎಂದು ಮನವಿ ಮಾಡಿದರು.
ರಾಣೆಬೆನ್ನೂರು ಶಾಸಕ ಪ್ರಕಾಶ್ ಕೋಳಿವಾಡ ಮಾತನಾಡಿ ದೇಶದಲ್ಲಿ 4500 ತಾಲ್ಲುಕುಗಳಿದೆ. ಅವುಗಳಲ್ಲಿ ರಾಣೆಬೆನ್ನೂರಿನ ಎಲ್ಲಾ ಸರ್ಕಾರಿ ಶಾಲೆಗಳಲ್ಲಿ ಮಾತ್ರ ಸ್ಮಾರ್ಟ್ ಕ್ಲಾಸ್ ಮೂಲಕ ಶಿಕ್ಷಣ ನೀಡಲಾಗುತ್ತಿದೆ ಹಾಗು ರೋಬೋ ಟೀಚರ್ ನೀಡುವ ಯೋಜನೆಯನ್ನು ರೂಪಿಸಲಾಗಿದೆ. ಆದರೆ ಇದು ಶಿಕ್ಷಕರ ಬದಲಿಗೆ ಶಿಕ್ಷಕಿಯಲ್ಲ, ಆದರೆ ಅವರಿಗೆ ಸಹಾಯ ಸಲಹೆ ನೀಡುತ್ತದೆ. ಎಲ್ಲಾ ಗ್ರಾಮಗಳಲ್ಲಿರುವ ಲೈಬ್ರರಿಗಳನ್ನು ಡಿಜಿಟಲ್ ಲೈಬ್ರರಿಯನ್ನಾಗಿ ಮಾಡಲಾಗುತ್ತಿದೆ. ಆ ಮೂಲಕ ಸ್ಪಧಾಧತ್ಮಕ ಪರೀಕ್ಷೆಗಳಲ್ಲಿ ಯುವಕರು ಹೆಚ್ಚು ಹೆಚ್ಚು ಪಾಲ್ಗೋಳ್ಳುವಂತೆ ಮಾಡಲಾಗುತ್ತದೆ.
ಇದೇ ಸಂಧರ್ಭದಲ್ಲಿ ವಿಭೂತಿಯನ್ನು ಧರಿಸಿ ಭಾರತೀಯ ನಾರಿಯಂತೆ ವೇದಿಕೆಗೆ ಬಂದಿದ್ದ ರೋಬೋಟ್ ಐರಿಯಾಳ ಪ್ರತ್ಯಕ್ಷತೆಯ ಪ್ರದರ್ಶನವನ್ನು ಮಾಡಿ ಶ್ರೀತರಳಬಾಳು ಮಠಕ್ಕೆ ಕೊಡುಗೆಯಾಗಿ ನೀಡಿದರು. ತರಳಬಾಳು ಸ್ವಾಮಿಗಳವರು, ಸರ್ ಎಂ.ವಿಶ್ವೇಶ್ವರಯ್ಯ ನವರ ಬಗ್ಗೆ ಕನ್ನಡದಲ್ಲಿ ಮಾಹಿತಿಯನ್ನು ನೀಡಿದ್ದು ಅದರ ಕಾರ್ಯಕ್ಷಮತೆಗೆ ಸಾಕ್ಷಿಯಾಯಿತು.
ಪತ್ರಕರ್ತರಾದ ಎಸ್.ರಶ್ಮಿ, ಕೀರ್ತಿ ಕೋಲ್ಗಾರ್. ರಾಜ್ಯ ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಸಿ.ಎಸ್.ಷಡಾಕ್ಷರಿ, ನಗರಸಭೆ ಅಧ್ಯಕ್ಷೆ ಜೆ.ಸಿ.ಗೀತಾ ರಾಜಕುಮಾರ್, ಹಾಗು ಇತರರು ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಇದೇ ಸಂಧರ್ಭದಲ್ಲಿ ಅಂತರಾಷ್ಟ್ರೀಯ ಧ್ವನಿ ಕಲಾವಿದ ಮಾಂತ್ರಿಕ ಮಾತಿನ ಪ್ರಹ್ಲಾದ್ ಆಚಾರ್ಯರ ಮಾತನಾಡುವ ಗೊಂಬೆ ಸಭೆಯನ್ನು ನಗೆಗಡಲಲ್ಲಿ ತೇಲಿಸಿತು.
ದಾವಣಗೆರೆ ಸುಶ್ರಾವ್ಯ ಸಂಗೀತ ವಿಧ್ಯಲಯದ ಯಶಾ ದಿನೇಶ್ ಸಂಗಡಿಗರು ವಚನ ಗೀತೆ ಹಾಡಿದರು. ಭದ್ರಾವತಿ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಿಳಾ ಸಮಾಜದ ವತಿಯಿಂದ ಮಂಜುನಾಥ ಚರಿತೆ ನೃತ್ಯ ಪ್ರದರ್ಶನ, ತೇವರಚಟ್ನಹಳ್ಳಿ ತರಳಬಾಳು ಶಾಲೆ ತುಂಗಾತೀರ ಕುವೆಂಪು ನಮನ, ಶ್ರೀ ಸತ್ಯ ಸಾಯಿ ಶಾಲೆಯವರು ಮರೆಯುವುದುಂಟೆ ಮೈಸೂರು ದೊರೆ ನೃತ್ಯ ಪ್ರದರ್ಶನ ಮಾಡಿದರು.
ಪಾರ್ವತಿ ಸಾಲೇರ ಸ್ವಾಗತಿಸಿದರು. ವಿಶ್ವನಾಥ ಕಾರ್ಯಕ್ರಮ ನಿರೂಪಿಸಿದರು.

