ಭದ್ರಾವತಿ: ಭದ್ರಾವತಿಯ ಪೊಲೀಸರು ಮತ್ತೊಬ್ಬ ರೌಡಿ ಶೀಟರ್ ಕಾಲಿಗೆ ಗುಂಡು ಹಾರಿಸಿದ್ದಾರೆ. ಗುಂಪು ಕಟ್ಟಿಕೊಂಡು ಡಕಾಯಿತಿಗೆ ತಯಾರಿ ನಡೆಸಿದ್ದ ರೌಡಿಶೀಟರ್ ಡಿಚ್ಚಿ ಮುಬಾರಕ್ ಕಾಲಿಗೆ ಗುಂಡು ಹೊಡೆಯುವ ಮೂಲಕ ಆಗುತ್ತಿದ್ದ ದೊಡ್ಡ ಕ್ರೈಮ್ ಒಂದನ್ನು ಪೊಲೀಸರು ತಡೆದಿದ್ದಾರೆ. ಆದರೆ ಘಟನೆಯಲ್ಲಿ ಓರ್ವ ಪಿಎಸ್ ಐ ಕೈ ಬೆರಳು ಮುರಿದಿದ್ದರೆ, ಮತ್ತೊರ್ವ ಪಿಎಸ್ ಐ ರವರ ಕಾಲಿನ ಮೂಳೆ ಮುರಿದಿದೆ. ಸಿಸಿಹೆಚ್ ಒಬ್ಬರ ಕಾಲಿಗೆ ಗಾಯವಾಗಿದೆ.
ಏನಿದು ಘಟನೆ? ಅಲ್ಲಿ ನಡೆದಿದ್ದು ಏನು?
ಭದ್ರಾವತಿಯ ಡಿಎಸ್ಪಿ ಪ್ರಕಾಶ್ ರಾಠೋಡ್ ರವರಿಗೆ ಶನಿವಾರ ಮಧ್ಯಾಹ್ನ ಬಾತ್ಮೀದಾರನೊಬ್ಬ ರಾಡಿಶೀಟರ್ ಡಿಚ್ಚಿ ಮುಬಾರಕ್ ಮತ್ತು 7-8 ಜನ ಸೇರಿಕೊಂಡು ಎಕ್ಸ್ ಯುವಿ ಮತ್ತು ಸ್ಕೂಟಿ ವಾಹನಗಳಲ್ಲಿ ಮಾರಕಾಸ್ತ್ರಗಳನ್ನಿಡಿದು ಶಿವನಿ ಕ್ರಾಸ್, ಗೌರಾಪುರ ಕಡೆ ತಿರುಗಾಡುತ್ತಾ ಡಕಾಯಿತಿಗೆ ಹೊಂಚು ಹಾಕುತ್ತಿರುವುದಾಗಿ ಮಾಹಿತಿ ನೀಡಿದ್ದ.
ಕೂಡಲೇ ಕಾರ್ಯ ಪ್ರವೃತ್ತರಾದ ಡಿಎಸ್ಪಿ ಪ್ರಕಾಶ್ ರಾಠೋಡ್, ಹೊಸಮನೆ ಠಾಣೆ ಪಿಎಸ್ಸೈ ಸಿದ್ದಪ್ಪ ಎಂ.ಪಿ., ಪೇಪರ್ ಟೌನ್ ಠಾಣೆ ಪಿಎಸ್ಸೈ ಕೃಷ್ಣಕುಮಾರ್ ಬಿ.ಮಾನೆ, ನ್ಯೂ ಟೌನ್ ಠಾಣೆ ಪಿಎಸ್ಸೈ ರಮೇಶ್, ಸಿಬ್ಬಂದಿಗಳಾದ ಎಎಸ್ಸೈ ವೆಂಕಟೇಶ್, ಸಿಹೆಚ್ ಸಿಗಳಾದ ಆದರ್ಶ, ನಾಗರಾಜ್, ಮಂಜುನಾಥ್, ಚಿನ್ನಾನಾಯ್ಕ್, ಸಿಪಿಸಿ ಗಳಾದ ತೇಜಕುಮಾರ್, ಸುನಿಲ್, ಕಾಂತರಾಜ್ ಇವತುಗಳ ವಿಶೇಷ ತ.ಡ ರಚಿಸಿ ಶಂಕಿತ ವ್ಯಕ್ತಿಗಳನ್ನು ವಶಕ್ಕೆ ಪಡೆಯಲು ಕಳುಹಿಸಿಕೊಟ್ಟಿರುತ್ತಾರೆ.
ಡಿಚ್ಚಿ ಮುಬಾರಕ್ ಕಾಲಿಗೆ ಗುಂಡೇಟು: ಭದ್ರಾವತಿಯಲ್ಲಿ ಡಕಾಯಿತಿಗೆ ಯತ್ನಿಸಿದ್ದ ರೌಡಿಶೀಟರ್..!!
ಭದ್ರಾವತಿಯ ಪೊಲೀಸರ ಕಾರ್ಯಾಚರಣೆ..
89

