Home ಅಪರಾಧ1 ಲಕ್ಷ ಲಂಚ: ಲೋಕಾ ಬಲೆಗೆ ವಿಎ

1 ಲಕ್ಷ ಲಂಚ: ಲೋಕಾ ಬಲೆಗೆ ವಿಎ

by Editor

ಶಿವಮೊಗ್ಗ : ಶಿಕಾರಿಪುರದಲ್ಲಿ ಖಾತೆ ಬದಲಾಯಿಸಿಕೊಡಲು ಒಂದು ಲಕ್ಷ ರೂ. ಲಂಚ ಪಡೆಯುವಾಗ ಗ್ರಾಮ ಲೆಕ್ಕಾಧಿಕಾರಿಯೊಬ್ಬರು ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ. ವಿಠ್ಠಲ ಕೋಲ್ಹರ ಲಂಚ ಪಡೆದ ಗ್ರಾಮ ಲೆಕ್ಕಾಧಿಕಾರಿ. ಖಾತಾ ಮಾಡಿಕೊಡಲು 1 ಲಕ್ಷ ರೂ. ಹಣ ಸ್ವೀಕರಿಸುವಾಗ ಲೋಕಯುಕ್ತ ಪೆÇಲೀಸರು ಬಂಧಿಸಿದ್ದಾರೆ.
ಶಿಕಾರಿಪುರ ತಾಲೂಕಿನ ಚಿಕ್ಕಬಂಜೂರಿನಲ್ಲಿರುವ ಜಮೀನಿನ ಖಾತೆ ಮಾಡಿಸಲು ಶಿಕಾರಿಪುರದ ತಾಲೂಕು ಕಚೇರಿಯ ಕಂದಾಯ ಇಲಾಖೆಗೆ ಜಮೀನಿನ ಮಾಲೀಕಿ ಜಕ್ರಿಯಾ ಬೇಗ್ ಎಂಬುವರು ಅವರಿಂದ ನಾಲ್ಕು ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿದ್ದರು. ಜಕ್ರಿಯಾ ಬೇಗ್ ಅವರಿಗೆ 4 ಲಕ್ಷ ಕೊಡಲು ಮನಸ್ಸಿಲ್ಲದ ಕಾರಣ ಲೋಕಾಯುಕ್ತರನ್ನ ಭೇಟಿ ನೀಡಿದ್ದರು. ಇಂದು ಗ್ರಾಮ ಲೆಕ್ಕಾಧಿಕಾರಿ ವಿಠ್ಠಲ ಕೊಲ್ಹರ 1 ಲಕ್ಷ ರೂ. ಸ್ವೀಕರಿಸುವಾಗ ಲೋಕಾಯುಕ್ತ ಎಸ್ಪಿ ಎಂ.ಎಸ್. ಕೌಲಾಪುರೆ ಅವರ ನೇತೃತ್ವದಲ್ಲಿ ದಾಳಿ ನಡೆಸಿ ಬಂಧಿಸಿದೆ.

You may also like

Leave a Comment

‘ಕರ್ನಾಟಕ ಅಸೋಷಿಯೇಷನ್ ಆಫ್ ಸ್ಮಾಲ್ ಅಂಡ್ ಮೀಡಿಯಂ ನ್ಯೂಸ್ ಪೇಪರ್ಸ್’ (KASMN) ಅಸ್ತಿತ್ವಕ್ಕೆ   ಈಶ್ವರಪ್ಪ ಹೇಳಿಕೆಗೆ ಸಿ.ಜಿ. ಮಧುಸೂದನ್ ಖಂಡನೆ   ಅಂತರರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದ ಡಾ. ರವಿ ಎಂ.   ಮೇ 16 ರಂದು ಕ್ಯಾನ್ಸರ್ ತಪಾಸಣಾ ಪ್ಯಾಕೇಜ್ ಉದ್ಘಾಟನಾ ಮತ್ತು ಮ್ಯಾಮೋಗ್ರಫಿ ಘಟಕದ ಉದ್ಘಾಟನಾ ಸಮಾರಂಭ   ಶಿಕ್ಷಣದಿಂದ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ: ಸಚಿವ ಮಧು ಬಂಗಾರಪ್ಪ