Home ಜಿಲ್ಲಾ ಸುದ್ದಿಗಳುದೈವಜ್ಞ ಸಮಾಜದವರು ಚಿನ್ನ ಬೆಳ್ಳಿಯಂತೆ ಶುದ್ದವಾಗಿರ ಬೇಕು: ಶ್ರೀ ಅಕ್ಷೋಭ್ಯ ರಾಮಪ್ರಿಯ ತೀರ್ಥ ಶ್ರೀಪಾದಂಗಳು

ದೈವಜ್ಞ ಸಮಾಜದವರು ಚಿನ್ನ ಬೆಳ್ಳಿಯಂತೆ ಶುದ್ದವಾಗಿರ ಬೇಕು: ಶ್ರೀ ಅಕ್ಷೋಭ್ಯ ರಾಮಪ್ರಿಯ ತೀರ್ಥ ಶ್ರೀಪಾದಂಗಳು

by Editor
ಶಿವಮೊಗ್ಗ: ದೈವಜ್ಞ ಸಮಾಜದವರು ಚಿನ್ನ ಬೆಳ್ಳಿಯಂತೆ ಶುದ್ದವಾಗಿರ ಬೇಕು  ಎಂದು ಶ್ರೀ ಮಾದಾರ್ಯ ಅಕ್ಷೋಭ್ಯ ತೀರ್ಥ ಮೂಲ ಸಂಸ್ಥಾನದ ಕಿರಿಯ ಪೀಠಾಧಿಪತಿ ಶ್ರೀ ಅಕ್ಷೋಭ್ಯ ರಾಮಪ್ರಿಯ ತೀರ್ಥ ಶ್ರೀಪಾದಂಗಳು ನುಡಿದರು.
ಅವರು ಶುಕ್ರವಾರ ಶಿವಮೊಗ್ಗದ ದೈವಜ್ಞ ಬ್ರಾಹ್ಮಣ ಶ್ರೀ ವಾದಿರಾಜ ಶಿಷ್ಯವೃಂದ    ದೈವಜ್ಞ ಕಲ್ಯಾಣ ಮಂದಿರದಲ್ಲಿ ಆಯೋಜಿಸಿದ್ದ ಶ್ರೀ ಮಧ್ವಾಧಿರಾಜರ 546ನೇ ಜಯಂತ್ಯುತ್ಸವ ಕಾರ್ಯಕ್ರಮದಲ್ಲಿ ಆಶೀರ್ವಚನ ನೀಡಿದರು.
ಇವತ್ತು ಚಿನ್ನ ಬೆಳ್ಳಿಗೆ ಉತ್ತಮ ಬೆಲೆ ಇದೆ. ಹಾಗೆ ದೈವಜ್ಞ  ಸಮಾಜದವರು
ಪ್ರಾಮಾಣಿಕರಾಗಿದ್ದು ಸಮಜದಲ್ಲಿ ಉನ್ನತ ಸ್ಥಾನ ಪಡೆಯ ಬೇಕು .ಅಭರಣಗಳ ತಯಾರಿಸುವ ಕೆಲಸ ಮಾತ್ರ ನಮ್ಮದು.ಅದರಲ್ಲಿ ತಯಾರಿಕೆಯ ವೆಚ್ಚ ಮಾತ್ರ ನಮಗೆ ಸಲ್ಲತ್ತದೆ. ನಿಜವಾದ ಅಭರಣ ಮಾಲೀಕನದು…ಹಾಗೆಯೇ ಭಕ್ತಿ ಕೂಡ..ಭಕ್ತಿ ನಮ್ಮದು ಶಕ್ತಿ ನಮ್ಮ ದೇವರದ್ದುಎಂದರು.
ಜೋಳ  ಧಾನ್ಯ ಕ್ಕೆ ಬೇಗ ಹುಳು ಹಿಡಿಯುತ್ತೆ ಅದರೆ ಮೆಣಿಸಿಗೆ ಹುಳು ಹಿಡಿಯಲ್ಲ ಮನುಷ್ಯ ಜೀವನವೂ ಹಾಗೆ ನಿಜವಾದ ಭಕ್ತಿಯ ಕಡೆ ನಾವು ಸಾಗ ಬೇಕು ಎಂದರು.
ವಾದಿರಾಜರ ಶಿಷ್ಯ ವೃಂದ  ಎರಡನೇ ಬಾರಿಗೂ ತುಂಬಾ ಅಚ್ಚುಕಟ್ಟಾಗಿ ಅತ್ಯಂತ ವಿಜೃಂಭಣೆಯಿAದ ಶಿವಮೊಗ್ಗದಲ್ಲಿ ಜಯಂತ್ಯುತ್ಸವ ಆಚರಿಸಿದೆ. ಇದು ನೆನಪಿನಲ್ಲಿ ಉಳಿಯುವಂತಹು
ದು. ಶಿಷ್ಯ ವೃಂದ ದ ಈ ಭಕ್ತಿ  ಶಕ್ತಿ ಯಾಗಿ ಬೆಳೆಯಲಿ ಸಮಾಜ ಮತ್ತಷ್ಟು ಪ್ರಕಾಶಮಾನವಾಗಿ ಬೆಳೆಯಲಿ ಎಂದರು.
  ದೈವಜ್ಞ ಸಮಾಜದವರು ತುಂಬಾ ಶ್ರೇಷ್ಠ ರು. ಅವರು ಕೇವಲ ಆಭರಣ ಮಾಡುವವರಲ್ಲ. ದೇವರ ವಿಗ್ರಹಗಳನ್ನೂ ಭಕ್ತಿಯಿಂದ ನಿರ್ಮಿಸಿ ತಾವು ದೈವತ್ವದ ಶಿಲ್ಪಿಗಳು ಎಂಬುದನ್ನು ಸಮಾಜಕ್ಕೆ ತಿಳಿಸಿದ್ದಾರೆ ಎಂದರು.
ಶ್ರೀ ವಾದಿರಾಜರ ಜನ್ಮ ವೃತ್ತಾಂತ ತಿಳಿಸಿದ ಶ್ರೀಗಳು, ವಾದಿರಾಜರು ದೇವರ ಮಗ. ದೇವರ ಮಗ ಎಂದು ಹೇಳುವುದು ಅಷ್ಟು ಸುಲಭದ ಮಾತಲ್ಲ. ಬ್ರಹ್ಮ ಪದವಿ ಪಡೆಯುವವರು ಮಾತ್ರ ದೇವರ ಕಂದ ಎನಿಸಿಕೊಳ್ಳುತ್ತಾರೆ. ಶ್ರೀ ವಾದಿರಾಜರು ಭಗವಂತನಲ್ಲಿ ಲೀನರಾಗಿ ಈ ಪದವಿ ಪಡೆದಿದ್ದಾರೆ ಎಂದರು.
ಶಿಷ್ಯವೃಂದ  ಶ್ರೀ ವಾದಿರಾಜರ ಜಯಂತಿಯನ್ನು ಅರ್ಥಪೂರ್ಣವಾಗಿ ಆಚರಿಸುತ್ತಾ ಬಂದಿದೆ.
ಇದು ಮತ್ತಷ್ಟು ಅರ್ಥಪೂರ್ಣಗೊಳ್ಳಬೇಕು. ಹಿರಿಯರ ಆದರ್ಶಗಳನ್ನು ನಾವು ಪಾಲಿಸಬೇಕು ಎಂದರು.
 ಮನುಷ್ಯ ಮಾನವೀಯ ಮೌಲ್ಯಗಳನ್ನು ರಕ್ಷಿಸ ಬೇಕು  . ಸಮಾಜದಲ್ಲಿ ಒಳ್ಳೆಯ ಪ್ರಜೆಗಳಾಗ ಬೇಕು ಎಂದರು.
ಇದಕ್ಕೂ ಮೊದಲು ವಿಶ್ವ ವಲ್ಲಭ ತೀರ್ಥಸ್ವಾಮಿಗಳ ಕೃಪಾಶೀರ್ವಾದದದೊಂದಿಗೆ ಶ್ರೀ ಮಧ್ವಾಧಿರಾಜರ ಭಾವಚಿತ್ರ ಮೆರವಣಿಗೆ ತಿಲಕ ನಗರದ ರಾಘವೇಂದ್ರ ಸ್ವಾಮಿ ಮಠದಿಂದ, ಜೈಲ್ ಸರ್ಕಲ್ ನಲ್ಲಿರುವ ದೈವಜ್ಞ ಬ್ರಾಹ್ಮಣ ಕಲ್ಯಾಣ ಮಂಟಪದಲ್ಲಿ ಸಂಪನ್ನಗೊಂಡಿತು.
ದೈವಜ್ಞ ಕಲ್ಯಾಣಮಂದಿರದಲ್ಲಿ ಶ್ರೀ ಮಧ್ವಾಧಿರಾಜರ ಪೂಜಾ ನಮನ ಕಾರ್ಯಕ್ರಮಗಳು ನಡೆದವು. ಸಮಾಜದ ಮಹಿಳೆಯರಿಂದ ಶ್ರೀ ಲಕ್ಷಿö್ಮ ಶೋಭಾನೆ ಪದ ಹಾಡಲಾಯಿತು. ಶ್ರೀ ಮಠದಿಂದ ಬಂದ ಮಂತ್ರಾಕ್ಷತೆ ವಿತರಿಸಲಾಯಿತು. ಸಮಾಜದ ಬಾಂಧವರು ಶ್ರೀಗಳ ದರ್ಶನ ಪಡೆದು ಪುನೀತರಾದರು. ನಂತರ ಪ್ರಸಾದ ವಿನಿಯೋಗ ನಡೆಯಿತು.
ರಾಜ ಬೀದಿ ಉತ್ಸವ ಮತ್ತು ಕಾರ್ಯಕ್ರಮದಲ್ಲಿ ದೈವಜ್ಞ ಬ್ರಾಹ್ಮಣ ಶ್ರೀ ವಾದಿರಾಜ ಶಿಷ್ಯ ವೃಂದದ ಪ್ರಮುಖರು, ಸಮಾಜದ ಗಣ್ಯರು, ಮಹಿಳೆಯರು, ಮಕ್ಕಳು ಭಾಗವಹಿಸಿದ್ದರು.
ಕಾರ್ಯಕ್ರಮ ದಲ್ಲಿ ನಾಗಭೂಷಣ ಆಚಾರ್ಯ ರು ಪ್ರಾಸ್ತಾವಿಕ ವಾಗಿ ಮಾತನಾಡಿದರು .
ಶಿಷ್ಯ ವೃಂದದವರು ಹಾಗು ಭಕ್ತರು  ಇದ್ದರು.

You may also like

Leave a Comment

ಸಮಾಜಸೇವಾ ಕಾರ್ಯಕರ್ತೆ ಕಲಾವಿದೆ ಕೆ.ಹೆಚ್.ಸುಮಿತ್ರ ಸುಮಗೆ ಕಿತ್ತೂರು ರಾಣಿ ಚೆನ್ನಮ್ಮ ರಾಜ್ಯ ಪ್ರಶಸ್ತಿಯ ಗರಿ ಸಾಧನೆಯ ಹೆಜ್ಜೆಗುರುತು.   Big News: ಹೊಸನಗರದಲ್ಲಿ ಅಕ್ರಮ ಭೂ ಮಂಜೂರಾತಿ: ತಹಶೀಲ್ದಾರ್-ಕ್ಲರ್ಕ್‍ಗಳೇ ನೇರ ಶಾಮೀಲು..!? ಕಾಸು ಕೊಟ್ಟರೆ ಯಾರಿಗೆ ಬೇಕಾದರೂ ಸರ್ಕಾರಿ ಜಾಗ ಬರೆದುಕೊಡುತ್ತಾರಂತೆ..!? ಕಂದಾಯ ಸಚಿವರೇ ಇತ್ತ ಗಮನಿಸಿ..!   ಡಿಚ್ಚಿ ಮುಬಾರಕ್ ಕಾಲಿಗೆ ಗುಂಡೇಟು: ಭದ್ರಾವತಿಯಲ್ಲಿ ಡಕಾಯಿತಿಗೆ ಯತ್ನಿಸಿದ್ದ ರೌಡಿಶೀಟರ್..!!   ಮಧ್ಯಮ ವರ್ಗ ಮತ್ತು ಸಣ್ಣ ಹೂಡಿಕೆದಾರರಿಗೆ ಬೆಳವಣಿಗೆಗೆ ಅವಕಾಶ: ನಿರ್ಮಲಾ ಸೀತಾರಾಮನ್   ರಕ್ಷಣಾ ಇಲಾಖೆಗೆ ಗಣನೀಯ ನಿಧಿ: ಕೇಂದ್ರ ಬಜೆಟ್‌ನಲ್ಲಿನಿರ್ಮಲಾ ಸೀತಾರಾಮನ್