Home ಅಪರಾಧಡಿಚ್ಚಿ ಮುಬಾರಕ್ ಕಾಲಿಗೆ ಗುಂಡೇಟು: ಭದ್ರಾವತಿಯಲ್ಲಿ ಡಕಾಯಿತಿಗೆ ಯತ್ನಿಸಿದ್ದ ರೌಡಿಶೀಟರ್..!!

ಡಿಚ್ಚಿ ಮುಬಾರಕ್ ಕಾಲಿಗೆ ಗುಂಡೇಟು: ಭದ್ರಾವತಿಯಲ್ಲಿ ಡಕಾಯಿತಿಗೆ ಯತ್ನಿಸಿದ್ದ ರೌಡಿಶೀಟರ್..!!

ಭದ್ರಾವತಿಯ ಪೊಲೀಸರ ಕಾರ್ಯಾಚರಣೆ..

by Editor

ಸಂಜೆ 07.00 ಗಂಟೆಯಿಂದ 07.15 ಗಂಟೆ ಸುಮಾರಿಗೆ ಡಿಚ್ಚಿ ಮುಬಾರಕ್ ತನ್ನ ಸಹಚರರೊಂದಿಗೆ ದರೋಡೆ ಮಾಡಲು
ಹೊಂಚು ಹಾಕುತ್ತಿರುವುದು ಕಂಡು ಬಂದ ಮೇರೆಗೆ ಅವರುಗಳನ್ನು ವಶಕ್ಕೆ ಪಡೆಯಲು ಹೋದಾಗ ಡಿಚ್ಚಿ ಮುಬಾರಕ್ ಮತ್ತು ಆತನ ಸಹಚರರು ಕಲ್ಲು ಮತ್ತು ಚಾಕುಗಳಿಂದ ಪೊಲೀಸರ ಮೇಲೆ ಮಾರಣಾಂತಿಕ ಹಲ್ಲೆ ಮಾಡಿದ್ದು, ಪಿಎಸ್ಸೈ ಸಿದ್ದಪ್ಪರವರ ಕಾಲಿನ ಮೂಳೆ
ಮುರಿದಿರುತ್ತದೆ. ಹಾಗು ಚಾಕುವಿನಿಂದ ಕೈಗೆ ಚುಚ್ಚಿ ಕೊಲೆ ಮಾಡಲು ಪ್ರಯತ್ನಿಸಿದ್ದು,
ರಕ್ತಗಾಯವಾಗಿರುತ್ತದೆ. ಕೃಷ್ಣಕುಮಾರ್ ಬಿ.ಮಾನೆ ಪಿಎಸ್‌ಐರವರ ಕೈ ಬೆರಳು ಮುರಿದಿರುತ್ತದೆ. ಮತ್ತು ಸಿಹೆಚ್‌ ಆದರ್ಶ ರವರ ಕಾಂಗೆ ಗಾಯವಾಗಿರುತ್ತದೆ. ಈ ಸಂದರ್ಭ ಕೃಷ್ಣಕುಮಾರ್ ಬಿ ಮಾನೆರವರು ಡಿಚ್ಚಿ ಮುಬಾರಕ್ ಗೆ ಶರಣಾಗುವಂತೆ ಸೂಚಿಸಿದರೂ ಕೇಳದೇ ಅವರ ಮೇಲೆ ಮತ್ತೆ ಹಲ್ಲೆಗೆ ಮುಂದಾದಾಗ ಪಿಎಸ್‌ಐರವರು ತನ್ನ ಬಳಿಯಿದ್ದ ಸರ್ವೀಸ್ ಪಿಸ್ತೂಲ್ ನಿಂದ ಗಾಳಿಯಲ್ಲಿ ಒಂದು ಸುತ್ತು
ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿರುತ್ತಾರೆ.ಆದರೂ ಸಹ ಡಿಜ್ಜೆ ಮುಬಾರಕ್ ಮತ್ತೆ ನಿಮ್ಮನ್ನು ಉಳಿಸುವುದಿಲ್ಲವೆಂದು ಹೇಳಿ ತನ್ನ ಬಳಿಯಿದ್ದ ಚಾಕುವಿನಿಂದ ಚುಚ್ಚಲು ಬಂದಾಗ ಪಿಎಸ್‌ಐ ರವರು ಆತ್ಮರಕ್ಷಣೆಗಾಗಿ ಡಿಚ್ಚಿ ಮುಬಾರಕ್ ನ ಕಾಲಿಗೆ ಗುಂಡು ಹಾರಿಸಿರುತ್ತಾರೆ. ಇದರಿಂದ ಡಿಚ್ಚಿ ಮುಬಾರಕ್
ಗಾಯಗೊಂಡಿರುತ್ತಾನೆ. ಕೂಡಲೇ ಆತನನ್ನು ಚಿಕಿತ್ಸೆಗಾಗಿ ಭದ್ರಾವತಿ ಸರ್ಕಾರಿ ಆಸ್ಪತ್ರೆಗೆ ಸೇರಿಸಿರುತ್ತಾರೆ. ಅಧಿಕಾರಿಗಳನ್ನು ಸಹ ಚಿಕಿತ್ಸೆಗಾಗಿ ಭದ್ರಾವತಿ ಸರ್ಕಾರಿ
ಆಸ್ಪತ್ರೆಗೆ ಸೇರಿಸಲಾಗಿರುತ್ತದೆ.
ಡಿಚ್ಚಿ ಮುಬಾರಕ್‌ನ ಜೊತೆಗಿದ್ದ ಸಹಚರರಾದ ಜಹೀರ್, ರೆಹಮತ್ ಪಾಷಾ, ಜುನೈದ್, ಮತ್ತು
ಮನುಸಿಂಗ್‌ ಅವರುಗಳನ್ನು ವಶಕ್ಕೆ ಪಡೆಯಲಾಗಿರುತ್ತದೆ.

You may also like

Leave a Comment

‘ಕರ್ನಾಟಕ ಅಸೋಷಿಯೇಷನ್ ಆಫ್ ಸ್ಮಾಲ್ ಅಂಡ್ ಮೀಡಿಯಂ ನ್ಯೂಸ್ ಪೇಪರ್ಸ್’ (KASMN) ಅಸ್ತಿತ್ವಕ್ಕೆ   ಈಶ್ವರಪ್ಪ ಹೇಳಿಕೆಗೆ ಸಿ.ಜಿ. ಮಧುಸೂದನ್ ಖಂಡನೆ   ಅಂತರರಾಷ್ಟ್ರೀಯ ಈಜು ಸ್ಪರ್ಧೆಯಲ್ಲಿ ಚಿನ್ನ ಮತ್ತು ಬೆಳ್ಳಿ ಪದಕ ಗೆದ್ದು ಸಂಭ್ರಮಿಸಿದ ಡಾ. ರವಿ ಎಂ.   ಮೇ 16 ರಂದು ಕ್ಯಾನ್ಸರ್ ತಪಾಸಣಾ ಪ್ಯಾಕೇಜ್ ಉದ್ಘಾಟನಾ ಮತ್ತು ಮ್ಯಾಮೋಗ್ರಫಿ ಘಟಕದ ಉದ್ಘಾಟನಾ ಸಮಾರಂಭ   ಶಿಕ್ಷಣದಿಂದ ಮಾತ್ರ ಸಾಮಾಜಿಕ ನ್ಯಾಯ ಸಾಧ್ಯ: ಸಚಿವ ಮಧು ಬಂಗಾರಪ್ಪ