Home Uncategorized‘ಶಿವಮೊಗ್ಗ ಸಿನಿ ದಸರಾ’ ಉದ್ಘಾಟಿಸಲಿರುವ ರಾಜೇಂದ್ರ ಸಿಂಗ್ ಬಾಬು, ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ಮಾಹಿತಿ

‘ಶಿವಮೊಗ್ಗ ಸಿನಿ ದಸರಾ’ ಉದ್ಘಾಟಿಸಲಿರುವ ರಾಜೇಂದ್ರ ಸಿಂಗ್ ಬಾಬು, ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ಮಾಹಿತಿ

Rajendra Singh Babu to inaugurate ‘Shivamogga Cine Dasara’; MLA S.N. Channabasappa shares details at a press conference.

by Editor

ಶಿವಮೊಗ್ಗ: ಮಲೆನಾಡಿನ ಕಿರುಚಿತ್ರ ಪ್ರತಿಭೆಗಳಿಗೆ ವೇದಿಕೆ, ಕನ್ನಡ ಚಿತ್ರರಂಗದ ಸಾಧಕರಿಗೆ ಗೌರವ ಹಾಗೂ ರಾಜ್-ಅನಂತ್ ಗೀತೆಗಳ ಸಂಗೀತ ಸಂಭ್ರಮ. ಇವೆಲ್ಲವನ್ನೂ ಒಳಗೊಂಡ ಶಿವಮೊಗ್ಗ ಸಿನಿ ದಸರಾ ಅ.14ರಂದು ಬೆಳಿಗ್ಗೆ 10 ಗಂಟೆಗೆ ನಗರದ ಸುವರ್ಣ ಸಾಂಸ್ಕøತಿಕ ಭವನದಲ್ಲಿ ನಡೆಯಲಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ತಿಳಿಸಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಮಹಾನಗರ ಪಾಲಿಕೆ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಾಗೂ ಸಿನಿಮೊಗೆ ಶಿವಮೊಗ್ಗ ಚಿತ್ರ ಸಮಾಜದ ಸಂಯುಕ್ತ ಆಶ್ರಯದಲ್ಲಿ ಕಾರ್ಯಕ್ರಮ ನಡೆಯಲಿದ್ದು, ಚಲನಚಿತ್ರ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಉದ್ಘಾಟಿಸಲಿದ್ದಾರೆ ಎಂದರು.

 


ಪೆÇೀಷಕ ಕಲಾವಿದೆ ಸಂಗೀತಾ ಅನಿಲ್, ಕರ್ನಾಟಕ ಚಲನಚಿತ್ರ ಅಕಾಡೆಮಿ ಸದಸ್ಯ ದೇಶಾದ್ರಿ ಹೊಸ್ಮನಿ ಹಾಗೂ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಹಾಯಕ ನಿರ್ದೇಶಕ ಬಿ.ವಿ. ತುಕಾರಾಂ ರಾವ್ ಪಾಲ್ಗೊಳ್ಳಲಿದ್ದಾರೆ. ಸಿನಿಮೊಗೆ ಚಿತ್ರ ಸಮಾಜ ಹಾಗೂ ರಾಜೇಂದ್ರ ಸಿಂಗ್ ಬಾಬು ಅವರನ್ನು ಗೌರವಿಸಲಾಗುವುದು. ಚಿತ್ರರಂಗದಲ್ಲಿ ಸಾಧನೆ ಮಾಡುತ್ತಿರುವ ನಗರದ ಪ್ರತಿಭೆಗಳಾದ ಗಾರ್ಗಿ ಕಾರೆಹಕ್ಲು, ಚಂದ್ರಶೇಖರ ಶಾಸ್ತ್ರಿ, ಚಂದ್ರಶೇಖರ ಹಿರೇಗೋಣಿಗೆರೆ, ದಾನಮ್, ಶಿವಮೊಗ್ಗ ರಾಮಣ್ಣ ಹಾಗೂ ರಘು ಗುಂಡ್ಲು ಅವರನ್ನು ಸನ್ಮಾನಿಸಲಾಗುವುದು ಎಂದು ಹೇಳಿದರು.
ವಿಧಾನ ಪರಿಷತ್ ಸದಸ್ಯ ಡಿ.ಎಸ್. ಅರುಣ್ ಮಾತನಾಡಿ, ಉದ್ಘಾಟನೆಯ ಬಳಿಕ ‘ಪ್ರತಿಬಿಂಬ’ ಶೀರ್ಷಿಕೆಯಡಿ ಮಲೆನಾಡಿನ ಪ್ರತಿಭೆಗಳು ನಿರ್ಮಿಸಿರುವ ಹತ್ತು ಕಿರುಚಿತ್ರಗಳನ್ನು ಪ್ರದರ್ಶಿಸಿ, ಸಂವಾದ ನಡೆಸಲಾಗುವುದು. ‘ಮಾಲ್ಗುಡಿ ಡೇಸ್’ ಖ್ಯಾತಿಯ ನಟ ಮಾಸ್ಟರ್ ಮಂಜುನಾಥ್ ಹಾಗೂ ಮಾಸ್ಟರ್ ರೋಹಿತ್ ಶ್ರೀನಾಥ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಸಂವಾದ ನಡೆಸಿಕೊಡಲಿದ್ದಾರೆ ಎಂದರು.

 

ಪೃಥ್ವಿ ಗೌಡ ನಿರ್ದೇಶನದ ‘ಕಬಂಧ’, ಪ್ರಶಾಂತ್ ಸಾಗರ್ ಅವರ ‘ಶರಾವತಿ’, ನಾಗರಾಜ್ ನೀಲ್ ಅವರ ‘ದಿ ಗಿಫ್ಟ್’, ಮೇದಿನಿ ಕೆಳಮನೆ ಅವರ ‘ದಾಳಿ’, ಈಶಾನ್ಯ ಶರ್ಮ ಅವರ ‘ಡಬಲ್ ಟಿಕ್’, ನಾಗರಾಜ ಕಿತ್ತೂರು ಅವರ ‘ಖಾಸಗಿ ಕನಸಿನ ಕಾಗದ’, ನವನ್ ಶ್ರೀನಿವಾಸ್ ಅವರ ‘ಗೋಣಿ ಚೀಲ’, ಅನಿಶ್ ಶರ್ಮ ಅವರ ‘ವಡ್ಡಾರಾಧಕ’, ನವೀನ್ ತೇಜಸ್ವಿ ಅವರ ‘ಹಬ್ಬ ಹರಿದಿನ ಸುಗ್ಗಿ ಶಿವರಾತ್ರಿ’ ಹಾಗೂ ವಿದ್ಯಾಲಕ್ಷ್ಮಿ ಪ್ರಹ್ಲಾದ್ ಅವರ ‘ಘಮ’ ಕಿರುಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದರು.
ಸಂಜೆ ರಾಜ್-ಅನಂತ್ ಗಾನಯಾನ ಸಂಗೀತ ಕಾರ್ಯಕ್ರಮ ನಡೆಯಲಿದ್ದು, ವಿನಯ್ ಶಿವಮೊಗ್ಗ, ಪೃಥ್ವಿ ಗೌಡ, ಕಾರ್ತಿಕ್ ನಾಗಲಾಪುರ ಹಾಗೂ ಸಂಗೀತಾ ಕನ್ನಡ ಚಿತ್ರಗೀತೆಗಳನ್ನು ಪ್ರಸ್ತುತಪಡಿಸಲಿದ್ದಾರೆ. ಮೇಲ್ವಿನ್ ಲೀಮಾ, ವಿನಯ್, ರಮೇಶ್, ರಾಘವೇಂದ್ರ ರಂಗಧೋಳ್ ಹಾಗೂ ವಿಠಲ್ ರಂಗಧೋಳ್ ವಾದ್ಯಸಂಗೀತದಲ್ಲಿ ಸಾಥ್ ನೀಡಲಿದ್ದಾರೆ. ಇಮ್ಯಾಜಿನ್ ಡಾನ್ಸ್ ಸ್ಟುಡಿಯೊ ತಂಡದಿಂದ ಚಿತ್ರಗೀತೆಗಳಿಗೆ ನೃತ್ಯ ಪ್ರದರ್ಶನ ಇರಲಿದೆ ಎಂದರು.
ಚಲನ ಚಿತ್ರಗಳ ಪ್ರದರ್ಶನ:

 

ರಾಜ್-ಅನಂತ್ ಸಿನಿ ಸಂಭ್ರಮದ ಅಂಗವಾಗಿ ನಗರದ ಚಿತ್ರಮಂದಿರಗಳಲ್ಲಿ ಕನ್ನಡದ ಜನಪ್ರಿಯ ಚಿತ್ರಗಳನ್ನು ಪ್ರದರ್ಶಿಸಲಾಗುವುದು. ಅ.14ರಂದು ಬೆಳಿಗ್ಗೆ 8.30ಕ್ಕೆ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಡಾ. ರಾಜ್‍ಕುಮಾರ್ ಅಭಿನಯದ ‘ಎರಡು ಕನಸು’, ಅ.16ರಂದು ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ‘ಸಂಪತ್ತಿಗೆ ಸವಾಲ್’ ಹಾಗೂ ಅ.17ರಂದು ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ‘ಗಾಳಿಪಟ-2’, ಅ.18ರಂದು ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ‘ಸರ್ಕಾರಿ ಹಿರಿಯ ಪ್ರಾಥಮಿಕ ಪಾಠಶಾಲೆ, ಕಾಸರಗೋಡು’, ಚಿತ್ರಗಳು ಪ್ರದರ್ಶನಗೊಳ್ಳಲಿವೆ ಎಂದು ಶಾಸಕ ಎಸ್. ಎನ್. ಚನ್ನಬಸಪ್ಪ ಮಾಹಿತಿ ನೀಡಿದರು.
ಸಿನಿ ದಸರಾ ಉತ್ಸವ ಸಮಿತಿಯ ಕಾರ್ಯದರ್ಶಿ ಯಶವಂತ್, ವೈದ್ಯನಾಥ, ವಿನಯ್ ಶಿವಮೊಗ್ಗ, ಜಿ. ವಿಜಯ್ ಕುಮಾರ್ ಹಾಗೂ ಅನಂತ್, ಮಹೇಶ್ ಇದ್ದರು.

You may also like

Leave a Comment

➤ ದಸರಾ ಮೆರವಣಿಗೆಯಲ್ಲಿ ಅನಾಹುತ: ಮುಂದಿನ ಕ್ರಮದ ಬಗ್ಗೆ ಚರ್ಚೆ   ➤ ದಸರಾ ಉತ್ಸವ ಯಶಸ್ವಿ, ಅವಘಡಕ್ಕೆ ನಾವೆಲ್ಲರೂ ಹೊಣೆಗಾರರು: ಚನ್ನಬಸಪ್ಪ   ➤ ಶಿವಮೊಗ್ಗ ಜಿಲ್ಲೆಯ ಕಾಮಗಾರಿ ಬಾಕಿ 1800 ಕೋಟಿ ಬಿಡುಗಡೆಗೆ ಗುತ್ತಿಗೆದಾರರ ಸಂಘ ಆಗ್ರಹ   ➤ ‘ಶಿವಮೊಗ್ಗ ಸಿನಿ ದಸರಾ’ ಉದ್ಘಾಟಿಸಲಿರುವ ರಾಜೇಂದ್ರ ಸಿಂಗ್ ಬಾಬು, ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ಮಾಹಿತಿ   ➤ ಕೂಡಲಿ ಶೃಂಗೇರಿ ಮಠದಲ್ಲಿ ವೈಭವದ ಶರನ್ನವರಾತ್ರಿ ಮಹೋತ್ಸವ: ಪ್ರತಿದಿನ ಹೋಮ, ಹವನ