Home ಅಂತರಾಷ್ಟ್ರೀಯಸರ್ಕಾರದ ಆದೇಶ ಉಲ್ಲಂಘಿಸಿ ವಂದೇ ಮಾತರಂ ಗೀತೆ ಹಾಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

ಸರ್ಕಾರದ ಆದೇಶ ಉಲ್ಲಂಘಿಸಿ ವಂದೇ ಮಾತರಂ ಗೀತೆ ಹಾಡಿರುವುದನ್ನು ವಿರೋಧಿಸಿ ಕಾಂಗ್ರೆಸ್ ಪ್ರತಿಭಟನೆ

Congress protests against the singing of the 'Vande Mataram' song in violation of the government order.

by Editor

ಶಿವಮೊಗ್ಗ: ಸರ್ಕಾರದ ಆದೇಶ ಉಲ್ಲಂಘಿಸಿ ವಂದೇ ಮಾತರಂ ಗೀತೆಯನ್ನು ಸರ್ಕಾರಿ ಕಾರ್ಯಕ್ರಮದಲ್ಲಿ ಹಾಡಿದ್ದನ್ನು ವಿರೋಧಿಸಿ ಇಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಜಿಲ್ಲಾಧಿಕಾರಿ ಗಳ ಕಚೇರಿಯ ಎದುರು ಪ್ರತಿಭಟನೆ ನಡೆಸಿ ಮನವಿ ಸಲ್ಲಿಸಿತು.
ನಗರ ಪಾಲಿಕೆಯ ದಸರಾ ಕಾರ್ಯಕ್ರಮದ ಉದ್ಘಾಟನಾ ಕಾರ್ಯಕ್ರಮದಲ್ಲಿ ಸರ್ಕಾರ ಆದೇಶದಂತೆ ವಂದೇ ಮಾತರಂ ಗೀತೆಯ ಎರಡು ಚರಣಗಳನ್ನು ಹಾಡಲಾಗಿತ್ತು. ಆದರೆ ಸ್ಥಳೀಯ ಶಾಸಕರಾದ ಎಸ್.ಎನ್. ಚನ್ನಬಸಪ್ಪ ಅವರು ಪೂರ್ಣ ನಾಲ್ಕು ಚರಣಗಳನ್ನು ಹಾಡಿಸಿ ದರು. ಪಾಲಿಕೆ ಆಯುಕ್ತ ಮಾಯಣ್ಣಗೌಡ ಉಪಸ್ಥಿತರಿ ದ್ದರು ಕೂಡ ಸರ್ಕಾರದ ಆದೇಶವನ್ನ ಉಲ್ಲಂಘಿಸಿದನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ಇದನ್ನು ಖಂಡಿಸಿ ನಿಗಮ ಮಂಡಳಿಯ ಅಧ್ಯಕ್ಷರು, ನಾಮ ನಿರ್ದೇಶಿತ ಸದಸ್ಯರು ಸಭಾ ತ್ಯಾಗ ಮಾಡಬೇಕಾಗಿ ಬಂತು ಎಂದು ಪ್ರತಿಭಟನಾಕಾರರು ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾ ಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹೆಚ್.ಸಿ. ಯೋಗೀಶ್ ಈ ಹಿಂದೆ ಕುವೆಂಪು ರಂಗಮಂದಿರ ದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸರ್ಕಾರದ ಆದೇಶದಂತೆ ಎರಡು ಚರಣ ಹಾಡಿದಾಗ ಇದೇ ಶಾಸಕರು ಸಭಾ ತ್ಯಾಗ ಮಾಡಿದರು. ತೀರ್ಥಹಳ್ಳಿ ಯಲ್ಲೂ ಕೂಡ ಮುಖ್ಯಮಂತ್ರಿ ಗಳು ಬಂದಿದ್ದಾಗ ಇದೇ ನಿಲುವನ್ನು ಪ್ರಕಟಿಸಿದ್ದರು. ಇದು ಪೂರ್ವ ನಿಯೋಜಿತವಾಗಿದೆ ಎಂದರು.
ಶಾಸಕ ಚನ್ನಬಸಪ್ಪ ಅವರು ದಸರಾ ಸಮಿತಿಯ ಅಧ್ಯಕ್ಷರಾ ಗಿದ್ದು ಇವರ ನೇತೃತ್ವದಲ್ಲಿ ಪೂರ್ವ ತಯಾರಿಯೊಂದಿಗೆ ಆಗಮಿಸಿ ಸರ್ಕಾರದ ಆದೇಶ ವನ್ನ ಉಲ್ಲಂಘಿಸಿ ವಂದೇ ಮಾತರಂ ಗೀತೆಯನ್ನ ಪೂರ್ಣ ವಾಗಿ ಹಾಡುವಂತೆ ಪ್ರೇರೆಪಣೆ ನೀಡಿದ್ದಾರೆ. ಆಯುಕ್ತರು ಕೂಡ ಸುಮ್ಮನಿದ್ದಾರೆ. ಆದರಿಂದ ಇದನ್ನು ಜಿಲ್ಲಾ ಕಾಂಗ್ರೆಸ್ ತೀವ್ರವಾಗಿ ಖಂಡಿಸುತ್ತದೆ. ಮತ್ತು ಮಹಾನಗರ ಪಾಲಿಕೆಯಿಂದ ನಡೆಸುತ್ತಿರುವ ದಸರಾ ಕಾರ್ಯ ಕ್ರಮವನ್ನು ಇನ್ನು ಮುಂದೆ ಜಿಲ್ಲಾಡಳಿತವೇ ವಹಿಸಿಕೊಂಡು ನಡೆಸಬೇಕು. ಕಾರಣ ಈ ಕಾರ್ಯಕ್ರಮ ಈಗ ಬಿಜೆಪಿ ಕಾರ್ಯಕ್ರಮವಾಗಿ ರೂಪಗೊಳ್ಳುತ್ತಿದೆ ಎಂದು ಮನವಿಯಲ್ಲಿ ತಿಳಿಸಲಾಗಿದೆ.

 


ಹಾಗಾಗಿ ಚನ್ನಬಸಪ್ಪ ಅವರನ್ನು ಸಮಿತಿಯ ಅಧ್ಯಕ್ಷರನ್ನಾಗಿ ಮುಂದುವರೆಸಬಾರದು ಮತ್ತು ಪಾಲಿಕೆ ಆಯುಕ್ತ ಮಾಯಣ್ಣಗೌಡ ವಿರುದ್ದ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ.
ಪ್ರತಿಭಟನೆಯಲ್ಲಿ ಪ್ರಮುಖರಾದ ಆರ್.ಪ್ರಸನ್ನಕುಮಾರ್, ಚೇತನ್ ಗೌಡ, ಮಧುಸೂಧನ್, ಎಸ್.ಪಿ ದಿನೇಶ್, ಶಿ.ಜು.ಪಾಷ, ಹೆಚ್.ಎಂ ಮಧು, ಪಾಲಕ್ಷಿ, ಆರ್.ರಾಜಶೇಖರ್, ಜಿ.ಡಿ.ಮಂಜುನಾಥ್, ದಿನೇಶ್ ಪಟೇಲ್,

 

 

 

ಮಂಜುನಾಥ ಬಾಬು, ಕವಿತಾ, ರೇಷ್ಮಾ, ಯಮುನಾ ರಂಗೇಗೌಡ, ವಿಜಯಲಕ್ಷ್ಮಿ ಪಾಟೀಲ್, ಸ್ಟೆಲಾ ಮಾರ್ಟಿನ್, ಚಿನ್ನಪ್ಪ, ಎಸ್. ರವಿಕುಮಾರ್, ಅರ್ಚನಾ ನಿರಂಜನ್, ಎಸ್.ಟಿ.ಹಾಲಪ್ಪ, ಪಿ.ಎಸ್.ಗಿರೀಶ್ ರಾವ್, ಡಾ. ಪ್ರದೀಪ್ ಡಿಮೇಲ್ಲೋ, ಯು.ಶಿವಾನಂದ್, ಕಲೀಂ ಪಾಷ, ಶಿವುಕುಮಾರ್ ಮತ್ತಿತರರು ಇದ್ದರು.

You may also like

Leave a Comment

➤ ದಸರಾ ಮೆರವಣಿಗೆಯಲ್ಲಿ ಅನಾಹುತ: ಮುಂದಿನ ಕ್ರಮದ ಬಗ್ಗೆ ಚರ್ಚೆ   ➤ ದಸರಾ ಉತ್ಸವ ಯಶಸ್ವಿ, ಅವಘಡಕ್ಕೆ ನಾವೆಲ್ಲರೂ ಹೊಣೆಗಾರರು: ಚನ್ನಬಸಪ್ಪ   ➤ ಶಿವಮೊಗ್ಗ ಜಿಲ್ಲೆಯ ಕಾಮಗಾರಿ ಬಾಕಿ 1800 ಕೋಟಿ ಬಿಡುಗಡೆಗೆ ಗುತ್ತಿಗೆದಾರರ ಸಂಘ ಆಗ್ರಹ   ➤ ‘ಶಿವಮೊಗ್ಗ ಸಿನಿ ದಸರಾ’ ಉದ್ಘಾಟಿಸಲಿರುವ ರಾಜೇಂದ್ರ ಸಿಂಗ್ ಬಾಬು, ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ಮಾಹಿತಿ   ➤ ಕೂಡಲಿ ಶೃಂಗೇರಿ ಮಠದಲ್ಲಿ ವೈಭವದ ಶರನ್ನವರಾತ್ರಿ ಮಹೋತ್ಸವ: ಪ್ರತಿದಿನ ಹೋಮ, ಹವನ