Home ಕರ್ನಾಟಕಕೂಡಲಿ ಶೃಂಗೇರಿ ಮಠದಲ್ಲಿ ವೈಭವದ ಶರನ್ನವರಾತ್ರಿ ಮಹೋತ್ಸವ: ಪ್ರತಿದಿನ ಹೋಮ, ಹವನ

ಕೂಡಲಿ ಶೃಂಗೇರಿ ಮಠದಲ್ಲಿ ವೈಭವದ ಶರನ್ನವರಾತ್ರಿ ಮಹೋತ್ಸವ: ಪ್ರತಿದಿನ ಹೋಮ, ಹವನ

Grand Sharannavaratri Festival at Koodali Sringeri Math: Daily Homa and Havana

by Editor

ಶಿವಮೊಗ್ಗ: ತಾಲ್ಲೂಕಿನ ಕೂಡಲಿಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಕೂಡಲಿ ಶೃಂಗೇರಿ ಮಹಾಸಂಸ್ಥಾನಮ್ ದಕ್ಷಿಣಾಮ್ನಾಯ ಮೂಲ ಶ್ರೀ ಶಾರದಾ ಪೀಠಮ್‍ನಲ್ಲಿ ಪ್ರತಿ ವರ್ಷದಂತೆ ಈ ವರ್ಷವೂ ಸಹ ಶರನ್ನವರಾತಿ ಮಹೋತ್ಸವವನ್ನು ಆಯೋಜಿಸಲಾಗಿದೆ.


ಮಹಾಸಂಸ್ಥಾನಮ್‍ನ ಪೀಠಾಧಿಪತಿಗಳಾದ ಶ್ರೀ ವಿದ್ಯಾಭಿನವ ವಿದ್ಯಾರಣ್ಯ ಭಾರತೀ ಮಹಾಸ್ವಾಮಿಗಳ ಸಾನ್ನಿಧ್ಯದಲ್ಲಿ ಮತ್ತೂರಿನ ವೇದವಿದ್ವಾನ್ ಪ್ರದೀಪ್ ಅಗ್ನಿಹೋತ್ರಿ ಅವರ ನೇತೃತ್ವದಲ್ಲಿ ಶರನ್ನವರಾತಿ ಪ್ರಯುಕ್ತ ಪ್ರತಿದಿನ ವಿವಿಧ ಹೋಮ, ಹವನಗಳನ್ನು ಏರ್ಪಡಿಸಲಾಗಿದೆ.

 


ಅಕ್ಟೋಬರ್ 11ರಂದು ಪಾರಾಯಣ ಮತ್ತು ನವಗ್ರಹ ಹೋಮ, 12ರಂದು ಶ್ರೀ ದುರ್ಗಾ ಸೂಕ್ತ ಹೋಮ, 13ರಂದು ಶ್ರೀ ಲಕ್ಷ್ಮೀನಾರಾಯಣ ಹೃದಯ, 14ರಂದು ಶ್ರೀ ದಕ್ಷಿಣಾಮೂರ್ತಿ ಹೋಮ, 15ರಂದು ಶ್ರೀ ಲಲಿತಾ ಸಹಸ್ರನಾಮ ಹೋಮ, 16ರಂದು ಶ್ರೀ ಆವಹಂತೀ ಹೋಮ, 17ರಂದು ಶ್ರೀ ಸುಬ್ರಹ್ಮಣ್ಯ ಹೋಮ, 18ರಂದು ಶ್ರೀ ಸರಸ್ವತೀ ಹೋಮ, 19ರಂದು ಶ್ರೀ ಮಹಾಲಕ್ಷ್ಮೀ ಹೋಮ ಹಾಗೂ ಅಕ್ಟೋಬರ್ 20ರಂದು ಶ್ರೀ ಚಂಡಿ ಹೋಮ ನಡೆಯಲಿದೆ.
ಶಾರದಾ ಶರನ್ನವರಾತ್ರಿಯು ತಾಯಿ ಶ್ರೀ ಶಾರದೆಯ ಆರಾಧನೆಗೆ ಅತ್ಯಂತ ಸೂಕ್ತ ಸಮಯ. ಇಂತಹ ಪೂರ್ಣತೆ ಇರುವ ಸಂದರ್ಭದಲ್ಲಿ ಆಸ್ತಿಕ ಜನರು ಮಾಡುವ ದೇವಿ ಆರಾಧನೆಗೆ ವಿಶೇಷ ಫಲ ಪ್ರಾಪ್ತಿ ಆಗುವುದು.

 

 

ದಿವ್ಯ ಸಾನ್ನಿಧ್ಯದಲ್ಲಿ ಏರ್ಪಡಿಸಿರುವ ವೈಭವದ ಶ್ರೀ ಶರನ್ನವರಾತ್ರಿ ಮಹೋತ್ಸವ ಸಂದರ್ಭವನ್ನು ಸದುಪಯೋಗಪಡಿಸಿಕೊಂಡು, ಅಕ್ಷರಭ್ಯಾಸ ಹಾಗೂ ಅಮ್ಮನವರ ಸನ್ನಿಧಿಯಲ್ಲಿ ಪ್ರತಿದಿನ ಜರುಗುವ ವಿವಿಧ ಹೋಮಗಳಲ್ಲಿ ಮತ್ತು 20-10-2026ರಂದು ಜರುಗುವ ಚಂಡಿಯಾಗದಲ್ಲಿ ಪಾಲ್ಗೊಂಡು ಪುರ್ಣವಾಗಿ ಶ್ರೀ ಶಾರದಾ ಪರಮೇಶ್ವರಿ ಅಮ್ಮನವರ ಹಾಗೂ ಜಗದ್ಗುರು ಮಹಾಸ್ವಾಮಿಗಳ ಕೃಪೆಗೆ ಪಾತ್ರರಗುವಂತೆ ಶ್ರೀಮಠದ ಆಡಳಿತಾಧಿಕಾರಿ ಹರ್ಷವರ್ಧನ್ ಕೋರಿದ್ದಾರೆ. ವಿವರಗಳಿಗೆ ಮೊ: 9164185225, 9480544225, 9353000433 ಸಂಪರ್ಕಿಸಲು ಕೋರಿದೆ.

You may also like

Leave a Comment

➤ ದಸರಾ ಮೆರವಣಿಗೆಯಲ್ಲಿ ಅನಾಹುತ: ಮುಂದಿನ ಕ್ರಮದ ಬಗ್ಗೆ ಚರ್ಚೆ   ➤ ದಸರಾ ಉತ್ಸವ ಯಶಸ್ವಿ, ಅವಘಡಕ್ಕೆ ನಾವೆಲ್ಲರೂ ಹೊಣೆಗಾರರು: ಚನ್ನಬಸಪ್ಪ   ➤ ಶಿವಮೊಗ್ಗ ಜಿಲ್ಲೆಯ ಕಾಮಗಾರಿ ಬಾಕಿ 1800 ಕೋಟಿ ಬಿಡುಗಡೆಗೆ ಗುತ್ತಿಗೆದಾರರ ಸಂಘ ಆಗ್ರಹ   ➤ ‘ಶಿವಮೊಗ್ಗ ಸಿನಿ ದಸರಾ’ ಉದ್ಘಾಟಿಸಲಿರುವ ರಾಜೇಂದ್ರ ಸಿಂಗ್ ಬಾಬು, ಪತ್ರಿಕಾಗೋಷ್ಠಿಯಲ್ಲಿ ಶಾಸಕ ಎಸ್.ಎನ್. ಚನ್ನಬಸಪ್ಪ ಮಾಹಿತಿ   ➤ ಕೂಡಲಿ ಶೃಂಗೇರಿ ಮಠದಲ್ಲಿ ವೈಭವದ ಶರನ್ನವರಾತ್ರಿ ಮಹೋತ್ಸವ: ಪ್ರತಿದಿನ ಹೋಮ, ಹವನ